ಕರಿ ಬುತ್ತಿ

– ಸವಿತಾ.

ಬೇಕಾಗುವ ಸಾಮಾನುಗಳು

ಗುರೆಳ್ಳು ಪುಡಿ – 3 ಚಮಚ
ಹುರುಳಿಕಾಳು ಪುಡಿ – 3 ಚಮಚ
ಜೀರಿಗೆ ಪುಡಿ – 2 ಚಮಚ
ಕಡಲೇಬೇಳೆ ಪುಡಿ – 1 ಚಮಚ
ಕೊತ್ತಂಬರಿಕಾಳು ಪುಡಿ – 2 ಚಮಚ
ಮೆಂತೆಕಾಳು ಪುಡಿ – 1 ಚಮಚ
ಹುಣಸೆಹಣ್ಣಿನ ರಸ – 3 ಚಮಚ
ಒಣ ಕೊಬ್ಬರಿ ತುರಿ – 6 ಚಮಚ
ಒಣ ಕಾರದ ಪುಡಿ – ಒಂದೂವರೆ ಚಮಚ
ಎಣ್ಣೆ – 4 ಚಮಚ
ಕರಿಬೇವು ಎಲೆ – 20
ಬೆಳ್ಳುಳ್ಳಿ ಎಸಳು – 2 ಗಡ್ಡೆ
ಅಕ್ಕಿ – 1 ಲೋಟ
ಉಪ್ಪು – ರುಚಿಗೆ ತಕ್ಕಶ್ಟು
ಅರಿಶಿಣ ಪುಡಿ – ಸ್ವಲ್ಪ

ಮಾಡುವ ಬಗೆ

ಮೊದಲು ಅಕ್ಕಿ ತೊಳೆದು ಅನ್ನ ಮಾಡಿ ಇಟ್ಟುಕೊಳ್ಳಿ. ಹುರುಳಿಕಾಳು ಹುರಿದು ತೆಗೆಯಿರಿ, ತಣ್ಣಗಾದ ನಂತರ ಪುಡಿ ಮಾಡಿ ಇಟ್ಟುಕೊಳ್ಳಿ. ಹೀಗೇ ಗುರೆಳ್ಳು ಹುರಿದು ತೆಗೆಯಿರಿ. ನಂತರ ಕಡಲೇಬೇಳೆ, ಜೀರಿಗೆ, ಕೊತ್ತಂಬರಿ ಕಾಳು, ಮೆಂತೆಕಾಳುಗಳನ್ನು ಒಂದೊಂದಾಗಿ ಹುರಿದು ಆರಿದ ನಂತರ ಮಿಕ್ಸರ್ ನಲ್ಲಿ ತಿರುಗಿಸಿ ನುಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಕೊಬ್ಬರಿ ತುರಿ ಅತವಾ ಪುಡಿ ಮಾಡಿ ಇಟ್ಟುಕೊಳ್ಳಿ. ಅರ‍್ದ ನಿಂಬೆಹಣ್ಣಿನಶ್ಟು ಹುಣಸೆಹಣ್ಣು ನೆನೆಹಾಕಿ ಚೆನ್ನಾಗಿ ಕುದಿಸಿ ಇಟ್ಟುಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಕರಿಬೇವು, ಬೆಳ್ಳುಳ್ಳಿ ಬಿಡಿಸಿ ಎಸಳು ಹಾಕಿ ಹುರಿದು ಒಲೆ ಆರಿಸಿ ಇಳಿಸಿ. ಅನ್ನ ಒಂದು ಅಗಲ ಪಾತ್ರೆಯಲ್ಲಿ ಹಾಕಿ ಒಂದೊಂದೇ ಪುಡಿ ಹಾಕಿ ಚೆನ್ನಾಗಿ ಕಲಸಿ. ಉಪ್ಪು, ಒಣ ಕಾರದಪುಡಿ ಅರಿಶಿಣಪುಡಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಒಗ್ಗರಣೆಗೆ ಕರಿಬೇವು ಮತ್ತು ಕುದಿಸಿಟ್ಟ ಹುಣಸೇರಸ ಹಾಕಿ. ಒಣ ಕೊಬ್ಬರಿ ತುರಿ ಹಾಕಿ ಚೆನ್ನಾಗಿ ಇನ್ನೊಮ್ಮೆ ಕಲಸಿ ಇಟ್ಟುಕೊಳ್ಳಿ.

ಈಗ ಮಲೆನಾಡಿನ ವಿಶೇಶ ಕರಿ ಬುತ್ತಿ ತಯಾರಾಯಿತು. ಮಾಡಿ ಸವಿಯಿರಿ.

ಇದನ್ನು ಪ್ರವಾಸಕ್ಕೆ ಹೋಗುವಾಗ ತೆಗೆದುಕೊಂಡು ಹೋಗಬಹುದು. ಎರಡು ಮೂರು ದಿನ ಇಟ್ಟು ಕೂಡ ತಿನ್ನಬಹುದು .

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: