ಕುಂಬಳಕಾಯಿ ಪಾಯಸ

– ಸವಿತಾ.

ಕುಂಬಳಕಾಯಿ ಪಾಯಸ Pumpkin sweet dish

ಬೇಕಾಗುವ ಪದಾರ‍್ತಗಳು:

ಕುಂಬಳಕಾಯಿ – ಎರಡು ಹೋಳು
ಕಡಲೆಬೇಳೆ – ಅರ‍್ದ ಬಟ್ಟಲು
ತುಪ್ಪ – ನಾಲ್ಕು ಚಮಚ
ಹಾಲು – ಎರಡು ಬಟ್ಟಲು
ಬೆಲ್ಲ – ಒಂದು ಬಟ್ಟಲು
ಸ್ವಲ್ಪ ಏಲಕ್ಕಿ, ಲವಂಗ
ಸ್ವಲ್ಪ ಗೋಡಂಬಿ, ಬಾದಾಮಿ, ಒಣದ್ರಾಕ್ಶಿ

ಮಾಡುವ ಬಗೆ:

ಕುಂಬಳಕಾಯಿ ಹೋಳನ್ನು ತೊಳೆದು ಮೇಲಿನ ಬೀಜ ತೆಗೆದು, ಸಿಪ್ಪೆ ಸಹಿತ ಕತ್ತರಿಸಿ ಇಟ್ಟುಕೊಳ್ಳಿ, ಇದಕ್ಕೆ ಕಡಲೇಬೇಳೆ ಸೇರಿಸಿ ಕುಕ್ಕರಿನಲ್ಲಿಟ್ಟು ನಾಲ್ಕು ಕೂಗು ಕೂಗಿಸಿ. ಆರಿದ ಬಳಿಕ ಕುಂಬಳಕಾಯಿ ಸಿಪ್ಪೆ ಕತ್ತರಿಸಿ ತೆಗೆದು ಸ್ವಲ್ಪ ಪುಡಿ ಮಾಡಿ ಇಟ್ಟುಕೊಳ್ಳಿ.

ಒಂದು ಬಾಣಲೆಯನ್ನು ಬಿಸಿಮಾಡಿ ಅದಕ್ಕೆ ಎರಡು ಚಮಚ ತುಪ್ಪ ಹಾಕಿ, ಕಡಲೇಬೇಳೆ ಹಾಕಿ ಹುರಿಯಿರಿ. ಬಳಿಕ ಬೇಯಿಸಿಟ್ಟ ಕುಂಬಳಕಾಯಿ ಹಾಕಿ ಕಲಸಿ. ಇದಕ್ಕೆ ಬೆಲ್ಲ ಹಾಕಿ ಕೈಯಾಡಿಸಿ, ಮತ್ತೆ ಹಾಲು ಸೇರಿಸಿ ಒಂದು ಕುದಿ ಕುದಿಸಿರಿ. ಬೆಲ್ಲ, ಬೇಳೆ ಮತ್ತು ಕುಂಬಳಕಾಯಿ ಎಲ್ಲಾ ಚೆನ್ನಾಗಿ ಬೆರೆಯುವವರೆಗೆ ಕುದಿಸಿ ಕೆಳಗೆ ಇಳಿಸಿ.

ಇನ್ನೊಂದು ಕಡೆ ಒಂದು ಸಣ್ಣ ಪಾತ್ರೆಯಲ್ಲಿ ಒಂದು ಚಮಚ ತುಪ್ಪ ಬಿಸಿಮಾಡಿ, ಅದಕ್ಕೆ ಏಲಕ್ಕಿ, ಲವಂಗ ಪುಡಿ ಮಾಡಿ ಸೇರಿಸಿ. ಬಳಿಕ ಅದಕ್ಕೆ ಜಜ್ಜಿದ ಗೋಡಂಬಿ, ಬಾದಾಮಿಯನ್ನು ಹಾಕಿ, ಕೊನೆಗೆ ಒಣದ್ರಾಕ್ಶಿಯನ್ನು ಸೇರಿಸಿ ಹುರಿದು ಪಾಯಸದ ಮೇಲೆ ಹಾಕಿ. ಈಗ ಕುಂಬಳಕಾಯಿ ಪಾಯಸ ತಯಾರಾಯಿತು.

(ಚಿತ್ರ ಸೆಲೆ:  ಸವಿತಾ.)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: