ಸೋರೆಕಾಯಿ ದೋಸೆ

– ರೂಪಾ ಪಾಟೀಲ್.

ಬೇಕಾಗುವ ಸಾಮಾನುಗಳು

ಅಕ್ಕಿ – 1 ಲೋಟ
ಉದ್ದಿನಬೇಳೆ – 1/4 ಬಟ್ಟಲು
ಅವಲಕ್ಕಿ – ಸ್ವಲ್ಪ
ಸೋರೆಕಾಯಿ – 1
ರುಚಿಗೆ ತಕ್ಕಶ್ಟು ಉಪ್ಪು

ಮಾಡುವ ಬಗೆ

ಅಕ್ಕಿ, ಉದ್ದಿನಬೇಳೆ ಮತ್ತು ಅವಲಕ್ಕಿಯನ್ನು ತೊಳೆದುಕೊಂಡು 5 ರಿಂದ 6ಗಂಟೆಗಳ ಕಾಲ ನೆನೆಸಿ, ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಬೇಕು. ರುಬ್ಬಿದ ಹಿಟ್ಟನ್ನು ರಾತ್ರಿಯಿಡೀ ಹುದುಗಲು ಬಿಡಿ. ಬೆಳಿಗ್ಗೆ ಹಿಟ್ಟಿನ ಮಿಶ್ರಣಕ್ಕೆ ಸೋರೆಕಾಯಿ ಸಿಪ್ಪೆಯನ್ನು ತೆಗೆದು ನುಣ್ಣಗೆ ರುಬ್ಬಿಕೊಂಡು ಸೇರಿಸಿ. ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಕಲಸಿ.

ಹತ್ತು ನಿಮಿಶ ಹಾಗೆಯೇ ಬಿಟ್ಟು ದೋಸೆ ತಯಾರಿಸಬಹುದು. ಗರಿಗರಿಯಾದ ಆರೋಗ್ಯಕರವಾದ ದೋಸೆ ಕೊಬ್ಬರಿ ಚಟ್ನಿ ಅತವಾ ಇನ್ನಾವುದೇ ಚಟ್ನಿಯೊಂದಿಗೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಗಡಿಬಿಡಿಯ ಜೀವನದಲ್ಲಿ ಸೋರೆಕಾಯಿ ದೋಸೆ ಮಕ್ಕಳಿಗೆ ಆರೋಗ್ಯಕರ ತಿಂಡಿಯೂ ಹೌದು.

(ಚಿತ್ರ ಸೆಲೆ: pixahive.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. savita kulkarni says:

    ಆರೋಗ್ಯ ಕರ ದೋಸೆ ಚೆನ್ನಾಗಿದೆ

savita kulkarni ಗೆ ಅನಿಸಿಕೆ ನೀಡಿ Cancel reply

Enable Notifications OK No thanks