ಹೆಸರುಬೇಳೆ-ಎಲೆಕೋಸು ಪಕೋಡಾ
– ಸವಿತಾ.
ಬೇಕಾಗುವ ಸಾಮಾನುಗಳು
- ಹೆಸರು ಬೇಳೆ – 1 ಬಟ್ಟಲು
- ಕತ್ತರಿಸಿದ ಎಲೆ ಕೋಸು – 1/2 ಬಟ್ಟಲು
- ಈರುಳ್ಳಿ – 1
- ಹಸಿ ಮೆಣಸಿನಕಾಯಿ – 3-4
- ಜೀರಿಗೆ – 1 ಚಮಚ
- ಓಂ ಕಾಳು (ಅಜಿವಾಯಿನ್) – 1/4 ಚಮಚ
- ಹಸಿ ಶುಂಟಿ – 1/4 ಇಂಚು
- ಕರಿಬೇವು ಎಲೆ – 1
- ಕೊತ್ತಂಬರಿ ಸೊಪ್ಪು – 3-4 ಕಡ್ಡಿ
- ಅಕ್ಕಿ ಹಿಟ್ಟು – 2 ಚಮಚ
- ಉಪ್ಪು ರುಚಿಗೆ ತಕ್ಕಶ್ಟು
- ತಿನ್ನುವ ಸೋಡಾ – 1 ಚಿಟಿಕೆ
- ಕರಿಯಲು ಎಣ್ಣೆ
ಮಾಡುವ ಬಗೆ
ಹೆಸರು ಬೇಳೆ ತೊಳೆದು ನಾಲ್ಕು ಗಂಟೆ ನೆನೆಸಿ ಇಟ್ಟುಕೊಳ್ಳಬೇಕು. ನಂತರ ಮಿಕ್ಸರ್‍ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಈರುಳ್ಳಿ, ಎಲೆಕೋಸು ಸಣ್ಣ ಕತ್ತರಿಸಿ ಇಟ್ಟುಕೊಳ್ಳಿ. ಹಸಿ ಮೆಣಸಿನಕಾಯಿ, ಸ್ವಲ್ಪ ಹಸಿ ಶುಂಟಿ , ಜೀರಿಗೆ, ಓಂ ಕಾಳು ಸೇರಿಸಿ ಅರೆದು ಪೇಸ್ಟ್ ಮಾಡಿ. ಕರಿಬೇವು ಎಲೆ, ಕೊತ್ತಂಬರಿ ಸೊಪ್ಪು ಸ್ವಲ್ಪ ಕತ್ತರಿಸಿ ಇಟ್ಟುಕೊಳ್ಳಿ.
ಕತ್ತರಿಸಿಟ್ಟುಕೊಂಡ ತರಕಾರಿ, ಪೇಸ್ಟ್ ಮತ್ತು ರುಬ್ಬಿದ ಹೆಸರು ಬೇಳೆ ಸೇರಿಸಿ ಚೆನ್ನಾಗಿ ಕಲಸಿ. ಅಕ್ಕಿ ಹಿಟ್ಟು, ರುಚಿಗೆ ತಕ್ಕಶ್ಟು ಉಪ್ಪು ಮತ್ತು ಸ್ವಲ್ಪ ಅಡುಗೆ ಸೋಡಾ ಹಾಕಿ ಇನ್ನೊಮ್ಮೆ ಚೆನ್ನಾಗಿ ಕಲಸಿಕೊಳ್ಳಿ. ನೀರು ಸೇರಿಸುವುದು ಬೇಕಾಗಿಲ್ಲ. ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ಬಿಸಿ ಬಿಸಿ ಹೆಸರುಬೇಳೆ-ಎಲೆಕೋಸು ಪಕೋಡಾ ಸವಿಯಲು ಸಿದ್ದ. ಸಂಜೆಯ ಚಹಾ ವೇಳೆ ಅತವಾ ಹಬ್ಬ ಹರಿದಿನಗಳಂದು ಮಾಡಿ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು