ಕವಿತೆ: ಗಜಲ್

– ವೆಂಕಟೇಶ ಚಾಗಿ.

ಆಕಾಶವನು ಮುಟ್ಟುವೆನು ಒಂದು ದಿನ ಚಿಂತಿಸದಿರು ಅಪ್ಪ
ನೆಲದ ಮೇಲಿನ ಡೊಂಬರಾಟದ ಬದುಕಿಗೆ ಚಿಂತಿಸದಿರು ಅಪ್ಪ

ನಿನ್ನ ಬಲವನೆಲ್ಲ ಸೇರಿಸಿ ಆಕಾಶಕ್ಕೊಮ್ಮೆ ಚಿಮ್ಮಿ ಬಿಡು
ನಿನ್ನ ನನಸುಗಳ ಹೊತ್ತು ತರುವೆ ನೋಡುತಿರು ಅಪ್ಪ

ಹಸಿವಿನ ಆಟವನು ನೋಡಲು ನೆರೆಯುವರು ನಾಟಕದ ಮಂದಿ
ನಿನ್ನಾಟದ ಗತ್ತು ಗಮ್ಮತ್ತುಗಳ ತೋರಿಸುವುದ ಮರೆಯದಿರು ಅಪ್ಪ

ಚಂದ್ರಮನ ತೋರಿಸಿ ಅಮ್ಮ ತುತ್ತು ಉಣಿಸುವಳು ಅಶ್ಟೇ
ತುತ್ತುಗಳ ಕೂಡಿಡಲು ನನ್ನ ಎಂದಿಗೂ ಕಡೆಗಣಿಸದಿರು ಅಪ್ಪ

ಕಟ್ಟಿಗೆಯು ತುಂಬಾ ಗಟ್ಟಿಯಾಗಿದೆ ಗೊತ್ತೆ ನನ್ನ ನಂಬಿಕೆಯಂತೆ
ಚಾಗಿಯ ಕವನಗಳಂತೆ ಬಡತನವ ಎಂದು ಮರೆಯದಿರು ಅಪ್ಪ

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks