ಹೊನಗೊನೆ ಸೊಪ್ಪಿನ ಚಟ್ನಿ

– ಸವಿತಾ.

ಬೇಕಾಗುವ ಸಾಮಾನುಗಳು

  • ಹೊನಗೊನೆ ಸೊಪ್ಪು – 3 ಬಟ್ಟಲು
  • ಈರುಳ್ಳಿ – 2
  • ಟೊಮೊಟೊ – 2
  • ಹಸಿ ಮೆಣಸಿನಕಾಯಿ – 6
  • ಜೀರಿಗೆ – 1/2 ಚಮಚ
  • ಉಪ್ಪು ರುಚಿಗೆ ತಕ್ಕಶ್ಟು
  • ಅರಿಶಿಣ ಪುಡಿ ಸ್ವಲ್ಪ
  • ಎಣ್ಣೆ – 3 ಚಮಚ
  • ಹುಣಸೇ ಹಣ್ಣು– 1/2 ಚಮಚ
  • ಕಡಲೇ ಬೀಜ (ಶೇಂಗಾ) – 1 ಬಟ್ಟಲು
  • ಕೊತ್ತಂಬರಿ ಸೊಪ್ಪು ಸ್ವಲ್ಪ
  • ಕರಿಬೇವು ಎಲೆ ಸ್ವಲ್ಪ

ಮಾಡುವ ಬಗೆ

ಕಡಲೇ ಬೀಜ ಹುರಿದು ಸಿಪ್ಪೆ ತೆಗೆದು ಪುಡಿ ಮಾಡಿ ಇಟ್ಟುಕೊಳ್ಳಿ. ಕೊತ್ತಂಬರಿ ಸೊಪ್ಪು ಕರಿಬೇವು ತೊಳೆದು ಇಟ್ಟುಕೊಳ್ಳಿ. ಹೊನಗೊನೆ ಸೊಪ್ಪಿನ ಎಲೆ ಮಾತ್ರ ಬಿಡಿಸಿ ತೊಳೆದು ನೀರು ಆರಲು ಇಡಬೇಕು. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಈರುಳ್ಳಿ ಕತ್ತರಿಸಿ ಹಾಕಿ ಹುರಿಯಿರಿ. ಹಸಿ ಮೆಣಸಿನಕಾಯಿ ಹಾಕಿ ಹುರಿಯಿರಿ. ಜೀರಿಗೆ ಹಾಕಿ ಹುರಿಯಿರಿ. ಕರಿಬೇವು, ಹೊನಗೊನೆ ಸೊಪ್ಪಿನ ಎಲೆ ಹಾಕಿ ಹುರಿಯಿರಿ. ಟೊಮೊಟೊ ಕತ್ತರಿಸಿ ಹಾಕಿ ಹುರಿಯಿರಿ. ಕೊತ್ತಂಬರಿ ಸೊಪ್ಪು ಹಾಕಿ, ಹುಣಸೆ ಹಣ್ಣು ಸ್ವಲ್ಪ ಹಾಕಿ ಚೆನ್ನಾಗಿ ಹುರಿಯಿರಿ. ಉಪ್ಪು ರುಚಿಗೆ ತಕ್ಕಶ್ಟು ಹಾಕಿ, ಅರಿಶಿಣ ಪುಡಿ ಸ್ವಲ್ಪ ಸೇರಿಸಿ ಹುರಿದು ಆರಲು ಬಿಡಿ. ಆಮೇಲೆ ಮಿಕ್ಸರ್ ನಲ್ಲಿ ರುಬ್ಬಿ, ಕಡಲೇ ಬೀಜದ ಪುಡಿ ಸೇರಿಸಿ ಇನ್ನೊಮ್ಮೆ ರುಬ್ಬಿ ಇಟ್ಟುಕೊಳ್ಳಿ. ಈಗ ಹೊನಗೊನೆ ಸೊಪ್ಪಿನ ಚಟ್ನಿ ಸವಿಯಲು ಸಿದ್ದ. ಅನ್ನ, ಚಪಾತಿ ಜೊತೆ ಸೈಡ್ ಡಿಶ್ ಆಗಿ ಸವಿಯಿರಿ. ಇದನ್ನು ಎರಡು ಮೂರು ದಿನ ಇಟ್ಟು ಸಹ ತಿನ್ನಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: