ಕವಿತೆ: ಅನುಬಂದ

– ಸವಿತಾ.

ಅಣ್ಣ ತಂಗಿಯರಾಡದ
ಆಟವಿಲ್ಲ
ಅಕ್ಕ ತಮ್ಮಂದಿರಾಡದ
ಜಗಳವಿಲ್ಲ
ಆಟ ಪಾಟ ಊಟ
ಮುಗಿದದ್ದು ಗೊತ್ತಾಗಲಿಲ್ಲ

ಬೆಳೆದಂತೆ ತಾಯಿಯಾದ
ಅಕ್ಕ ತಂಗಿಯರೀಗ
ತಂದೆಯಂತೆ ಆಸರೆಗೆ ನಿಂತ
ಅಣ್ಣ ತಮ್ಮಂದಿರೀಗ
ಸಂಬಂದದ ಅರಿವು
ಹೊಸದಲ್ಲ

ನೆನಪಿನ ಬುತ್ತಿಯಲ್ಲಿ
ಸವಿ ಉಂಡವರ ಮಾತು
ಕೇಳಲು ಬಲು ಮದುರ
ಕಶ್ಟಕ್ಕೆ ಹೆಗಲೊಡ್ಡಿ
ಸಂತಸಕ್ಕೆ ಕೈಕೂಡಿ
ನಲಿದ ದಿನಗಳೇ ಚಂದ

ಸೋದರ ಸೋದರಿಯರ
ವಾತ್ಸಲ್ಯ ಯಾವತ್ತೂ ಅನುಕರಣೀಯ
ಮತ್ತೇ ಒಲಿದು ಬರಲಿ
ಎಂದೇ ಆಶಯ

(ಚಿತ್ರ ಸೆಲೆ: coloringkids.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *