ತರಕಾರಿ ಸೂಪ್

– ಸವಿತಾ.

ಬೇಕಾಗುವ ಸಾಮಾನುಗಳು

  • ಕತ್ತರಿಸಿದ ಎಲೆ ಕೋಸು (ಕ್ಯಾಬೇಜ್) – 1 ಬಟ್ಟಲು
  • ಕತ್ತರಿಸಿದ ಈರುಳ್ಳಿ – 1 ಬಟ್ಟಲು
  • ಕತ್ತರಿಸಿದ ಟೊಮೆಟೊ – 2 ಬಟ್ಟಲು
  • ಕತ್ತರಿಸಿದ ಬೀನ್ಸ್ (ತಿಂಗಳವರೆ) – 1/2 ಬಟ್ಟಲು
  • ಉಪ್ಪು ರುಚಿಗೆ ತಕ್ಕಶ್ಟು
  • ಕರಿಮೆಣಸಿನ ಕಾಳು – 20
  • ತುಪ್ಪ ಅತವಾ ಬೆಣ್ಣೆ – 2 ಚಮಚ
  • ಬೆಳ್ಳುಳ್ಳಿ ಎಸಳು – 20
  • ಹಸಿ ಶುಂಟಿ – 1/4 ಇಂಚು
  • ಅರಿಶಿಣ ಪುಡಿ ಸ್ವಲ್ಪ
  • ಕೊತ್ತಂಬರಿ ಸೊಪ್ಪು ಸ್ವಲ್ಪ
  • ಪುದೀನಾ ಎಲೆ – 5 ರಿಂದ 6
  • ಸಕ್ಕರೆ – 1/2 ಚಮಚ(ಬೇಕಿದ್ದರೆ)

ಮಾಡುವ ಬಗೆ

ಕತ್ತರಿಸಿದ ಈರುಳ್ಳಿ, ಟೊಮೆಟೊ ಹಾಗೂ ಎಲೆ ಕೋಸನ್ನು ಕುಕ್ಕರ್ ನಲ್ಲಿ ಮೂರು ಕೂಗು ಕುದಿಸಿ ಇಳಿಸಿ. ಬೀನ್ಸ್ ಅನ್ನು ಬೇರೆ ಬಟ್ಟಲಿನಲ್ಲಿ ಕುದಿಸಿ ತೆಗೆದಿಡಿ. ಕುದಿಸಿದ ಈರುಳ್ಳಿ, ಟೊಮೆಟೊ ಹಾಗೂ ಎಲೆ ಕೋಸಿಗೆ ಸ್ವಲ್ಪ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ. ಒಂದು ಪಾತ್ರೆಗೆ ತುಪ್ಪ ಹಾಕಿ ಬಿಸಿ ಮಾಡಿ. ಬೆಳ್ಳುಳ್ಳಿ ಎಸಳು, ಹಸಿ ಶುಂಟಿ ಪೇಸ್ಟ್ ಮಾಡಿ ಹಾಕಿ ಹುರಿಯಿರಿ. ನಂತರ ಬೀನ್ಸ್ ಹಾಕಿ ಹುರಿಯಿರಿ. ರುಬ್ಬಿದ ಮಿಶ್ರಣ ಹಾಕಿ ಚೆನ್ನಾಗಿ ಹುರಿಯಿರಿ. ಸ್ವಲ್ಪ ಉಪ್ಪು ಮತ್ತು ಕರಿಮೆಣಸಿನ ಕಾಳು ಪುಡಿ ಮಾಡಿ ಸೇರಿಸಿ. ಅರಿಶಿಣ ಪುಡಿ ಹಾಕಿ. ಸ್ವಲ್ಪ ನೀರು ಸೇರಿಸಿ ಒಂದು ಕುದಿ ಕುದಿಸಿ, ಒಲೆ ಆರಿಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಮತ್ತು ಪುದೀನಾ ಎಲೆ ಹಾಕಿ ಅಲಂಕಾರ ಮಾಡಿ. ಬೇಕಾದರೆ ಚೀಸ್ ತುರಿದು ಸೇರಿಸಬಹುದು ಮತ್ತು ಬ್ರೆಡ್ ತುಂಡುಗಳನ್ನು ತುಪ್ಪದಲ್ಲಿ ಕರಿದು ಸೇರಿಸಬಹುದು. ಈಗ ತರಕಾರಿ ಸೂಪ್ ಸವಿಯಲು ಸಿದ್ದ. ಚಿಲ್ಲಿ ಸಾಸ್, ಟೊಮೆಟೊ ಸಾಸ್, ಸೋಯಾ ಸಾಸ್ ಹಾಕಿಕೊಂಡೂ ಸಹ ಸವಿಯಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: