ಬೆಂಡೆಕಾಯಿ ಗೊಜ್ಜು
– ಸವಿತಾ.
ಬೇಕಾಗುವ ಸಾಮಾನುಗಳು
ಬೆಂಡೆಕಾಯಿ – 15
ತೆಂಗಿನ ತುರಿ – 1/2 ಕಪ್
ಎಳ್ಳು – 1 ಚಮಚ
ಕಡಲೇ ಬೇಳೆ – 1 ಚಮಚ
ಉದ್ದಿನ ಬೇಳೆ – 1 ಚಮಚ
ಮೆಂತೆ ಕಾಳು – 1/4 ಚಮಚ
ತುಪ್ಪ – 4 ಚಮಚ
ಕರಿಬೇವು ಎಲೆ – 20
ಕೊತ್ತಂಬರಿ ಸೊಪ್ಪು – ಸ್ವಲ್ಪ
ಸಾಸಿವೆ – 1/2 ಚಮಚ
ಇಂಗು – 1/4 ಚಮಚ
ಒಣ ಮೆಣಸಿನಕಾಯಿ – 3
ಹಸಿ ಮೆಣಸಿನಕಾಯಿ – 3
ಹುಣಸೇ ಹಣ್ಣು – 1/2 ನಿಂಬೆ ಹಣ್ಣಿನ ಗಾತ್ರದಶ್ಟು
ಬೆಲ್ಲ ದ ಪುಡಿ – 1 ಚಮಚ
ಉಪ್ಪು ರುಚಿಗೆ ತಕ್ಕಶ್ಟು
ಅರಿಶಿಣ ಪುಡಿ ಸ್ವಲ್ಪ
ಮಾಡುವ ಬಗೆ
ಹುಣಸೇ ಹಣ್ಣನ್ನು ನೀರಿನಲ್ಲಿ ನೆನೆಸಿ ರಸ ತೆಗೆದು ಇಟ್ಟುಕೊಳ್ಳಿ. ಬೆಂಡೆಕಾಯಿ ತೊಳೆದು, ಕತ್ತರಿಸಿ ಇಟ್ಟುಕೊಳ್ಳಿ. ತೆಂಗಿನ ಕಾಯಿಯನ್ನು ತುರಿದುಕೊಳ್ಳಿ.
ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ, ಎಳ್ಳು, ಕಡಲೇ ಬೇಳೆ, ಉದ್ದಿನ ಬೇಳೆ, ಮೆಂತೆ ಕಾಳು, ಕರಿಬೇವು , ಹಸಿ ಮೆಣಸಿನಕಾಯಿ ಹಾಕಿ ಹುರಿದು ತೆಗೆಯಿರಿ. ಹಸಿ ಕೊಬ್ಬರಿ ಸೇರಿಸಿ ಒಂದು ಸುತ್ತು ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಅದೇ ಬಾಣಲೆಗೆ ತುಪ್ಪ ಸೇರಿಸಿ ಬಿಸಿ ಮಾಡಿ ಸಾಸಿವೆ, ಕರಿಬೇವು, ಇಂಗು ಹಾಕಿ ಮತ್ತು ಒಣ ಮೆಣಸಿನಕಾಯಿ ಮುರಿದು ಹಾಕಿ. ಕತ್ತರಿಸಿದ ಬೆಂಡೆಕಾಯಿ ಹಾಕಿ ಹುರಿಯಿರಿ. ರುಬ್ಬಿದ ಮಿಶ್ರಣ ಸೇರಿಸಿ ಚೆನ್ನಾಗಿ ಹುರಿಯಿರಿ. ಉಪ್ಪು ಮತ್ತು ಅರಿಶಿಣ ಪುಡಿ ಸೇರಿಸಿ, ಹುಣಸೇ ರಸ ಮತ್ತು ಸ್ವಲ್ಪ ನೀರು ಸೇರಿಸಿ ಕಲಸಿ. ಬೆಲ್ಲದ ಪುಡಿ ಹಾಕಿ ಒಂದು ಕುದಿ ಕುದಿಸಿ, ಒಲೆ ಆರಿಸಿ.
ಈಗ ಬೆಂಡೆಕಾಯಿ ಗೊಜ್ಜು ತಯಾರಾಗಿದೆ. ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ ತಿನ್ನಲು ನೀಡಿ. ಅನ್ನ, ಚಪಾತಿ ಇಲ್ಲವೇ ರೊಟ್ಟಿ ಜೊತೆ ಸವಿಯಿರಿ.
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು