ಕವಿತೆ: ಗಿರಿಜಾ ತನಯ ಲಂಬೋದರ

– ಶ್ಯಾಮಲಶ್ರೀ.ಕೆ.ಎಸ್.

ಗಣಪ, ಗಣೇಶ, Ganapa, Lord Ganesha,

ಹೇ ಗಣನಾತ ಪ್ರತಮ ಪೂಜಿತ
ನಮಿಪೆವು ನಿನಗೆ ಸಿದ್ದಿ ವಿನಾಯಕ
ಮಹಾಕಾಯ ವಿಶ್ವ ವಂದಿತ
ಸರ‍್ವಶ್ರೇಶ್ಟ ಪ್ರಬು ವಿದ್ಯಪ್ರದಾಯಕ

ಬಾದ್ರಪದ ಮಾಸದ ಚೌತಿಯಂದು
ಬಕ್ತಜನ ನಿನ್ನನ್ನು ನಿಶ್ಟೆಯಿಂದ ಸ್ವಾಗತಿಸುವರು
ಬೂದೇವಿಯ ಒಡಲ ಮಣ್ಣಿನಿಂದ
ಮಾಡಿದ ನಿನ್ನ ಪ್ರತಿಕ್ರುತಿಯ ಆರಾದಿಸುವರು

ನಿನಗೂ ಮುನ್ನವೇ ಮಾತೆ ಗೌರಿಯನು
ಪೂಜೆಗೆ ಕರೆತರುವರು ಓ ಮುದ್ದು ಬೆನಕ
ತಾಯಿಗೆ ಬಾಗೀನವ ಕೊಟ್ಟು, ಗರಿಕೆಯನು
ನಿನಗಿಟ್ಟು, ಅರ‍್ಪಿಸುವರು ಕಡುಬು ಮೋದಕ

ಚಿಣ್ಣರಿಗೂ ಪ್ರಿಯ ನೀನೆಂದರೆ ಗಜಾನನ
ಆನಂದದಿ ನಲಿವರು ನಿನ್ನ ಹಬ್ಬದಲ್ಲಿ
ಕರಮುಗಿದು ಬೇಡುವರು ಸ್ಪರ‍್ಶಿಸಿ ನಿನ್ನ ಚರಣ
ಸದ್ಬುದ್ದಿಯ ನೀಡೆಂದು ಬಕ್ತಿ ಬಾವದಲ್ಲಿ

ವಿಜ್ರುಂಬಣೆಯ ಆಚರಣೆಯು ನಿನಗೆ
ವೈಬವದಿ ವಿಸರ‍್ಜನೆಯಾಗುವ ನೀ ಲೋಕೋದ್ದಾರಕ
ಸಂಕಶ್ಟಗಳ ಪರಿಹರಿಸಿ ಸನ್ಮಾರ‍್ಗವ ತೋರೆಮಗೆ
‌ಹೇ ಹರಸುತ ಗಿರಿಜಾ ತನಯ ಲಂಬೋದರ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: