ಅಕ್ಕಿ-ಸಬ್ಬಕ್ಕಿ ಪಾಯಸ
– ಸವಿತಾ.
ಬೇಕಾಗುವ ಸಾಮಾನುಗಳು
ಅಕ್ಕಿ – 1 ಲೋಟ
ಸಾಬೂದಾನಿ(ಸಬ್ಬಕ್ಕಿ) – 1/2 ಲೋಟ
ಕೊಬ್ಬರಿ ತುರಿ – 1/2 ಲೋಟ
ಸಕ್ಕರೆ ಅತವಾ ಬೆಲ್ಲದ ಪುಡಿ – 1 ಲೋಟ
ತುಪ್ಪ – 4 ಚಮಚ
ಗೋಡಂಬಿ – 10
ಬಾದಾಮಿ – 2
ಏಲಕ್ಕಿ – 2
ಕೇಸರಿ ದಳ – 2
ಅರಿಶಿಣ ಪುಡಿ – 1 ಚಿಟಿಕೆ
ಹಾಲು – 3 ಲೋಟ
ಮಾಡುವ ಬಗೆ
ಅಕ್ಕಿ ತೊಳೆದು ಎರಡು ತಾಸು ನೆನೆಯಲು ಇಡಬೇಕು. ಸಬ್ಬಕ್ಕಿಯನ್ನೂ ಹಾಗೇ ನೀರಿನಲ್ಲಿ ನೆನೆಯಲು ಇಡಬೇಕು. ಅಕ್ಕಿ ನೀರು ಬಸಿದು ಹಸಿ ಕೊಬ್ಬರಿ ತುರಿ ಸೇರಿಸಿ ಮಿಕ್ಸರ್ ನಲ್ಲಿ ರುಬ್ಬಿ ತೆಗೆಯಿರಿ.
ಒಂದು ಲೋಟ ನೀರು ಬಿಸಿ ಮಾಡಿ, ಸಬ್ಬಕ್ಕಿ ಹಾಕಿ ಕುದಿಯಲು ಇಡಿರಿ. ಕುದಿಯುವ ಸಬ್ಬಕ್ಕಿಗೆ ಹಾಲು ಮತ್ತು ಅಕ್ಕಿ-ಕೊಬ್ಬರಿ ರುಬ್ಬಿದ ಮಿಶ್ರಣ ಸೇರಿಸಿ ಗಟ್ಟಿಯಾಗುವವರೆಗೆ ಕುದಿಸಿರಿ. ಬೆಲ್ಲ ಅತವಾ ಸಕ್ಕರೆ ಹಾಕಿ, ಎರಡು-ಮೂರು ಚಮಚ ತುಪ್ಪ. ಕೇಸರಿ ದಳ ಸೇರಿಸಿ ತಿರುವುತ್ತಾ ಇರಿ. ಸ್ವಲ್ಪ ಅರಿಶಿಣ ಪುಡಿ ಹಾಕಿರಿ. ಅರಿಶಿಣವನ್ನು ಕೇವಲ ಬಣ್ಣ ಬರಲು ಹಾಕುವುದು. ತುಪ್ಪದಲ್ಲಿ ಗೋಡಂಬಿ, ಬಾದಾಮಿ ಹುರಿದು ಸೇರಿಸಿ ಒಲೆ ಆರಿಸಿ. ಏಲಕ್ಕಿ ಪುಡಿ ಮಾಡಿ ಹಾಕಿ ಈಗ ಅಕ್ಕಿ ಸಬ್ಬಕ್ಕಿ ಪಾಯಸ ಸವಿಯಲು ಸಿದ್ದ .
ಇತ್ತೀಚಿನ ಅನಿಸಿಕೆಗಳು