ಕೊತ್ತಂಬರಿ ಸೊಪ್ಪಿನ ಪೂರಿ

– ಸವಿತಾ.

ಬೇಕಾಗುವ ಸಾಮಾನುಗಳು

  • ಗೋದಿ ಹಿಟ್ಟು/ಮೈದಾ ಹಿಟ್ಟು – 1 ಲೋಟ
  • ರವೆ – 1 ಚಮಚ
  • ಮೈದಾ ಹಿಟ್ಟು – 1 ಚಮಚ (ಗೋದಿ ಹಿಟ್ಟು ಬಳಸಿದರೇ ಮಾತ್ರ ಸೇರಿಸಿ )
  • ಉಪ್ಪು ರುಚಿಗೆ ತಕ್ಕಶ್ಟು
  • ಎಣ್ಣೆ – 2 ಚಮಚ
  • ಕೊತ್ತಂಬರಿ ಸೊಪ್ಪು – ಅರ‍್ದ ಕಟ್ಟು
  • ಜೀರಿಗೆ – ಅರ‍್ದ ಚಮಚ
  • ಹಸಿ ಶುಂಟಿ ಸ್ವಲ್ಪ
  • ಹಸಿ ಮೆಣಸಿನಕಾಯಿ – 3
  • ಕೊತ್ತಂಬರಿ ಕಾಳು – ಅರ‍್ದ ಚಮಚ
  • ಕರಿಯಲು ಎಣ್ಣೆ

ಮಾಡುವ ಬಗೆ

ಮೊದಲಿಗೆ ಕೊತ್ತಂಬರಿ ಸೊಪ್ಪು ತೊಳೆದು ಕತ್ತರಿಸಿ ಮಿಕ್ಸರ‍್ ಜಾರ‍್ ನಲ್ಲಿ ಹಾಕಿ. ಜೀರಿಗೆ, ಹಸಿ ಮೆಣಸಿನಕಾಯಿ, ಹಸಿ ಶುಂಟಿ, ಕೊತ್ತಂಬರಿ ಕಾಳು, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ ತೆಗೆಯಿರಿ. ಗೋದಿ ಹಿಟ್ಟು, ಮೈದಾ ಹಿಟ್ಟು, ರುಬ್ಬಿದ ಮಿಶ್ರಣ ಮತ್ತು ಎರಡು ಚಮಚ ಎಣ್ಣೆ ಹಾಕಿ ಚೆನ್ನಾಗಿ ನಾದಿಟ್ಟುಕೊಳ್ಳಿ. ಈಗ ಸೊಪ್ಪು ಉಪ್ಪು ನೀರು ಬಿಡುತ್ತದೆ. ಇದಕ್ಕೆ ಸ್ವಲ್ಪ ನೀರು ಹಾಕಿ ಕಲಸಿ ಅರ‍್ದ ಗಂಟೆ ಕಾಲ ಬಿಟ್ಟು ಪೂರಿ ಲಟ್ಟಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ಕೊತ್ತಂಬರಿ ಸೊಪ್ಪಿನ ಪೂರಿ ತಯಾರಾಯಿತು. ಇದನ್ನುಚಟ್ನಿ, ಸಾಂಬಾರು ಅತವಾ ಪಲ್ಯದ ಜೊತೆ ಸವಿಯಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: