ಕವಿತೆ: ಕಾಡುವ ಚಿಂತೆ

– ಶ್ಯಾಮಲಶ್ರೀ.ಕೆ.ಎಸ್.

ಗೊಂದಲಗಳ ಸ್ರುಶ್ಟಿಸಿ
ಮನಕೆ ನೋವುಣಿಸಿ
ಆಗಾಗ್ಗೆ ಕಾಡುವುದು ಈ ಚಿಂತೆ
ಚಿಂತನೆಗೂ ಜಾಗ ಬಿಡದಂತೆ

ಕಿರಿಯರನ್ನು ಬಿಡದು
ಹಿರಿಯರನ್ನು ತೊರೆಯದು
ಮಮಕಾರವ ತೋರದು
ಸ್ತಿತಿ ಗತಿಗಳ ಗಮನಿಸದೇ
ಮತಿಗೆಟ್ಟು ಕಾಡುವುದೀ ಚಿಂತೆ

ಇತಿಮಿತಿಗಳ ಅರಿಯದೇ
ಸಮಯದ ಪರಿವೇ ಇಲ್ಲದೇ
ಸಮಸ್ಯೆಗಳ ಸಡಿಲಿಸದೇ
ಪದೇಪದೇ ಬದುಕಿನ ಬೆನ್ನೇರಿ
ಬೆಂಬಿಡದೆ ಕಾಡುವುದು ಈ ಚಿಂತೆ

ಚಿಂತೆಯನು ಪೊರೆದರೆ
ವ್ಯಾದಿಗಳು ಪಡೆವುವು ಆಸರೆ
ಚಿಂತೆಯನು ದೂರವಿಟ್ಟರೆ
ಆವರಿಸುವುದು ಮನಶಾಂತಿಯ ಪೊರೆ
ಬದುಕು ನೆಮ್ಮದಿಯ ಸೆರೆ

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: