ಹೆಸರು ಬೇಳೆ ಕಿಚಡಿ
– ಸವಿತಾ.
ಬೇಕಾಗುವ ಸಾಮಾನುಗಳು
- ಅಕ್ಕಿ – ಅರ‍್ದ ಲೋಟ
- ಹೆಸರು ಬೇಳೆ – ಅರ‍್ದ ಲೋಟ
- ಗಜ್ಜರಿ – 1
- ಈರುಳ್ಳಿ – 1
- ಟೊಮೆಟೊ – 2
- ಬೆಳ್ಳುಳ್ಳಿ ಎಸಳು – 4
- ಹಸಿ ಶುಂಟಿ ಸ್ವಲ್ಪ
- ಹಸಿ ಮೆಣಸಿನಕಾಯಿ – 2
- ಸಾಸಿವೆ – ಅರ‍್ದ ಚಮಚ
- ಜೀರಿಗೆ – ಅರ‍್ದ ಚಮಚ
- ಇಂಗು ಸ್ವಲ್ಪ
- ಗರಮ್ ಮಸಾಲಾ ಪುಡಿ – ಅರ‍್ದ ಚಮಚ
- ಉಪ್ಪು ರುಚಿಗೆ ತಕ್ಕಶ್ಟು
- ಅರಿಶಿಣ ಪುಡಿ ಸ್ವಲ್ಪ
- ತುಪ್ಪ – 3 ಚಮಚ
- ಕೊತ್ತಂಬರಿ ಸೊಪ್ಪು ಸ್ವಲ್ಪ
ಮಾಡುವ ಬಗೆ
ಮೊದಲಿಗೆ ಅಕ್ಕಿ ಮತ್ತು ಹೆಸರು ಬೇಳೆ ನೀರಿನಲ್ಲಿ ತೊಳೆದು ಕುಕ್ಕರ್ ನಲ್ಲಿ 5 ಕೂಗು ಕುದಿಸಿ ಇಳಿಸಿ. ಆಮೇಲೆ ಗಜ್ಜರಿ ತೊಳೆದು ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿರಿ. ಈರುಳ್ಳಿ ಮತ್ತು ಟೊಮೇಟೊ ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿರಿ. ಹಸಿ ಮೆಣಸಿನಕಾಯಿ, ಹಸಿ ಶುಂಟಿ, ಬೆಳ್ಳುಳ್ಳಿ ಮತ್ತು ಎಸಳು ಅರೆದಿಟ್ಟುಕೊಳ್ಳಿರಿ. ತುಪ್ಪ ಬಾಣಲೆಗೆ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಇಂಗು ಹಾಕಿ ನಂತರ ಶುಂಟಿ ಬೆಳ್ಳುಳ್ಳಿ ಹಸಿ ಮೆಣಸಿನ ಕಾಯಿ ಪೇಸ್ಟ್ ಹಾಕಿ ಹುರಿಯಿರಿ. ಕತ್ತರಿಸಿದ ಈರುಳ್ಳಿ, ಗಜ್ಜರಿ(ಕ್ಯಾರೇಟ್) ಟೊಮೇಟೊ ಹಾಕಿ ಹುರಿಯಿರಿ. ಕುದಿಸಿದ ಅಕ್ಕಿ, ಹೆಸರುಬೇಳೆ ಹಾಕಿ ಸ್ವಲ್ಪ ನೀರು ಹಾಕಿರಿ. ಉಪ್ಪು ರುಚಿಗೆ ತಕ್ಕಶ್ಟು ಹಾಕಿ ಅರಿಶಿಣ ಮತ್ತು ಗರಮ್ ಮಸಾಲೆ ಪುಡಿ ಹಾಕಿ ಒಂದು ಕುದಿ ಕುದಿಸಿ ಇಳಿಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಮೇಲೆ ಉದುರಿಸಿ. ಈಗ ಹೆಸರು ಬೇಳೆ ಕಿಚಡಿ ಸವಿಯಲು ಸಿದ್ದ.
ಇತ್ತೀಚಿನ ಅನಿಸಿಕೆಗಳು