ವೀಳ್ಯದೆಲೆಯ ರಸಮ್
– ಸವಿತಾ.
ಬೇಕಾಗುವ ಸಾಮಾನುಗಳು
- ವೀಳ್ಯದೆಲೆ – 4
- ಟೊಮೆಟೊ – 1
- ಕರಿಮೆಣಸಿನ ಕಾಳು – ಅರ‍್ದ ಚಮಚ
- ಜೀರಿಗೆ – ಅರ‍್ದ ಚಮಚ
- ಕರಿ ಬೇವು ಸ್ವಲ್ಪ
- ಕೊತ್ತಂಬರಿ ಸೊಪ್ಪು ಸ್ವಲ್ಪ
- ಉಪ್ಪು ರುಚಿಗೆ ತಕ್ಕಶ್ಟು
- ಅರಿಶಿಣ ಪುಡಿ ಸ್ವಲ್ಪ
- ಇಂಗು ಸ್ವಲ್ಪ
- ಸಾಸಿವೆ – ಅರ‍್ದ ಚಮಚ
- ಜೀರಿಗೆ – ಅರ‍್ದ ಚಮಚ( ಒಗ್ಗರಣೆಗೆ )
- ತುಪ್ಪ – 2 ಚಮಚ
- ಒಣ ಕಾರದ ಪುಡಿ – 1 ಚಮಚ
- ಒಣ ಮೆಣಸಿನಕಾಯಿ – 1
- ಹುಣಸೆ ರಸ – 3 ಚಮಚ
- ಬೆಲ್ಲ – 1 ಚಮಚ
- ರಸಂ ಪುಡಿ – ಅರ‍್ದ ಚಮಚ
ಮಾಡುವ ಬಗೆ
ಮೊದಲಿಗೆ ವೀಳ್ಯದೆಲೆ, ಟೊಮೆಟೊ ಕತ್ತರಿಸಿ ಮಿಕ್ಸರ‍್ ನಲ್ಲಿ ನುಣ್ಣಗೆ ರುಬ್ಬಿ ತೆಗೆಯಿರಿ.ಆಮೇಲೆ ಒಂದು ಬಾಣಲೆಗೆ ಹಾಕಿ ಒಂದು ಲೋಟ ನೀರು ಹಾಕಿ ಕುದಿಯಲು ಇಟ್ಟು, ಕರಿ ಮೆಣಸಿನ ಕಾಳು ಅರ‍್ದ ಚಮಚ ಜೀರಿಗೆ ಪುಡಿಮಾಡಿ ಹಾಕಿ. ಒಲೆಯನ್ನು ಸಣ್ಣ ಉರಿಯಲ್ಲಿ ಉರಿಸಿ. ಇನ್ನೊಂದು ಬಾಣಲೆಗೆ ತುಪ್ಪ ಹಾಕಿ, ಸಾಸಿವೆ, ಜೀರಿಗೆ, ಇಂಗು, ಕರಿಬೇವು ಮತ್ತು ಒಣ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಆಮೇಲೆ ಉಪ್ಪು, ಅರಿಶಿಣ, ಒಣ ಕಾರದ ಪುಡಿ ಹಾಕಿ ಒಲೆ ಆರಿಸಿ. ಒಗ್ಗರಣೆಯನ್ನು ಕುದಿಯುವ ವೀಳ್ಯದೆಲೆ ಮಿಶ್ರಣಕ್ಕೆ ಹಾಕಿ. ನಂತರ ಹುಣಸೆ ರಸ, ಬೆಲ್ಲ, ರಸಂ ಪುಡಿ ಮತ್ತು ಸ್ವಲ್ಪ ನೀರು ಸೇರಿಸಿ ಒಂದು ಕುದಿ ಕುದಿಸಿ ಇಳಿಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಮೇಲೆ ಉದುರಿಸಿ. ಈಗ ವೀಳ್ಯದೆಲೆಯ ರಸಂ ಸವಿಯಲು ಸಿದ್ದವಾಗಿದ್ದು ಅನ್ನದ ಜೊತೆ ಸವಿಯಬಹುದು.
ಇತ್ತೀಚಿನ ಅನಿಸಿಕೆಗಳು