ಅಕ್ಕಿ-ಗೋದಿ ಹಿಟ್ಟಿನ ವಡೆ

– ಸವಿತಾ.

ಬೇಕಾಗುವ ಸಾಮಾನುಗಳು

ಅಕ್ಕಿ ಹಿಟ್ಟು – 1/2 ಲೋಟ
ಗೋದಿ ಹಿಟ್ಟು – 1/2 ಲೋಟ
ಹಸಿ ಕೊಬ್ಬರಿ ತುರಿ – 1/2 ಲೋಟ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಹಸಿ ಮೆಣಸಿನಕಾಯಿ – 3
ಜೀರಿಗೆ – 1/2 ಚಮಚ
ಅಜೀವಾಯಿನ್ ಅತವಾ ಓಂ ಕಾಳು – 1/4 ಚಮಚ
ಎಣ್ಣೆ – 2 ಚಮಚ
ಅಡುಗೆ ಸೋಡಾ – 1/4 ಚಮಚ
ಅರಿಶಿಣ ಪುಡಿ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಶ್ಟು
ಕರಿಯಲು ಎಣ್ಣೆ

ಮಾಡುವ ಬಗೆ

ಹಸಿ ಕೊಬ್ಬರಿ ತುರಿ, ಹಸಿ ಮೆಣಸಿನಕಾಯಿ, ಜೀರಿಗೆ, ಓಂ ಕಾಳು, ಸ್ವಲ್ಪ ಉಪ್ಪು ಸೇರಿಸಿ ಮಿಕ್ಸರ್ ನಲ್ಲಿ ಪುಡಿ ಮಾಡಿ ತೆಗೆಯಿರಿ. ಅಕ್ಕಿ ಹಿಟ್ಟು ಮತ್ತು ಗೋದಿ ಹಿಟ್ಟಿಗೆ, ರುಬ್ಬಿದ ಕೊಬ್ಬರಿ ಮಿಶ್ರಣ, ಚಿಟಿಕೆ ಅರಿಶಿಣ, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಒಂದು ಚಿಟಿಕೆ ಅಡುಗೆ ಸೋಡಾ, ಸ್ವಲ್ಪ ಎಣ್ಣೆ ಹಾಕಿ, ನೀರು ಹಾಕಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ. ಬೇಕಿದ್ದರೆ ರುಚಿಗೆ ತಕ್ಕಶ್ಟು ಉಪ್ಪು ಮತ್ತೊಮ್ಮೆ ಸೇರಿಸಿಕೊಳ್ಳಿ.

ಕೈಗೆ ನೀರು ಹಚ್ಚಿ, ವಡೆ ತಟ್ಟಿ ಕಾದ ಎಣ್ಣೆಯಲ್ಲಿ ಹಾಕಿ ಕರಿದು ತೆಗೆಯಿರಿ. ಬಿಸಿ ಅಕ್ಕಿ-ಗೋದಿ ಹಿಟ್ಟಿನ ವಡೆ ಸವಿಯಲು ಸಿದ್ದ. ಕೊಬ್ಬರಿ ಚಟ್ನಿ ಅತವಾ ಆಲೂಗಡ್ಡೆ ಪಲ್ಯದ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: