ಮಾಡಿ ನೋಡಿ ಕೋಳಿ ಲಿವರ್ ಪೆಪ್ಪರ್ ಪ್ರೈ

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

  • ಕೋಳಿ ಲಿವರ್ – ಅರ‍್ದ ಕೆ.ಜಿ.
  • ಬೆಳ್ಳುಳ್ಳಿ – 15-18 ಎಸಳು
  • ಶುಂಟಿ – 1.5 ಇಂಚು
  • ಬೇವಿನ ಎಲೆ ಸ್ವಲ್ಪ
  • ಹಸಿಮೆಣಸು – 4
  • ಅರಿಶಿಣ – 2 ಚಮಚ
  • ಕಾರದ ಪುಡಿ – 1 ಚಮಚ
  • ಕಾಳುಮೆಣಸಿನ ಪುಡಿ – 2 ಚಮಚ ( ಕಾರದ ಗಾವಿಗೆ ಅನುಗುಣವಾಗಿ)
  • ನಿಂಬೆಹುಳಿ/ವಿನೆಗರ್ – ಸ್ವಲ್ಪ
  • ಸೋಯಾ ಸಾಸ್ – 2 ಚಮಚ
  • ಚಿಲ್ಲಿ ಸಾಸ್ ( ಬೇಕಾದ್ದಲ್ಲಿ ) – 2 ಚಮಚ
  • ಈರುಳ್ಳಿ – 2-3
  • ಉಪ್ಪು ರುಚಿಗೆ ತಕ್ಕಶ್ಟು
  • ದನಿಯಾ ಪುಡಿ – ಅರ‍್ದ ಚಮಚ
  • ಗರಂ ಮಸಾಲೆ – ಕಾಲು ಚಮಚ
  • ಎಣ್ಣೆ – ಸ್ವಲ್ಪ
  • ಕೊತ್ತಂಬರಿ ಸೊಪ್ಪು – ಸ್ವಲ್ಪ ( ಚೆಂದಕಾಣಿಸಲು )

ಮಾಡುವ ಬಗೆ

ಮೊದಲಿಗೆ ಕೋಳಿ ಲಿವರ್ ತೊಳೆದುಕೊಂಡು ಒಂದು ಕುಕ್ಕರ್ ಗೆ ಹಾಕಿಕೊಳ್ಳಿರಿ. ಆಮೇಲೆ ಇದಕ್ಕೆ ಉಪ್ಪು, ಅರಿಶಿಣ ಮತ್ತು ಸ್ವಲ್ಪ ನೀರು ಹಾಕಿ ಒಂದು ಸೀಟಿ ಹೊಡೆಸಿ ತೆಗೆದಿಡಿ. ಈಗ ಇನ್ನೊಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿಕೊಳ್ಳಿ. ಇದಕ್ಕೆ ಜಜ್ಜಿಟ್ಟುಕೊಂಡ ಬೆಳ್ಳುಳ್ಳಿ ಎಸಳು, ಕರಿಬೇವು, ಹಸಿಮೆಣಸಿನಕಾಯಿ ಮತ್ತು ಶುಂಟಿ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಈರುಳ್ಳಿ ಮತ್ತು ಸ್ವಲ್ಪ ಉಪ್ಪು ಹಾಕಿ ಬಾಡಿಸಿ. ಇಲ್ಲಿ ಈರುಳ್ಳಿಯನ್ನು ತೀರಾ ಬಾಡಿಸ ಬೇಕೆಂದೇನಿಲ್ಲ. ಅಮ್ಮೆಲೆ ಇದಕ್ಕೆ ಕಾರದ ಪುಡಿ, ದನಿಯಾ ಪುಡಿ, ಗರಂ ಮಸಾಲೆ, ಕಾಳುಮೆಣಸಿನ ಪುಡಿ, ಸ್ವಲ್ಪ ಅರಿಶಿಣ ಮತ್ತು ಸ್ವಲ್ಪ ನೀರು ಹಾಕಿ ಹುರಿಯಿರಿ. ಆಮೇಲೆ ಸೋಯಾ ಸಾಸ್ ಮತ್ತು ಚಿಲ್ಲಿ ಸಾಸ್ ಹಾಕಿ. ಹಸಿ ಗಮ ಹೋಗುತ್ತಿದ್ದಹಾಗೆ, ಬೇಯಿಸಿದ ಲಿವರ್ ಅನ್ನು ಹಾಕಿಕೊಳ್ಳಿ ಮತ್ತು ಅದರ ಜೊತೆ ಅದರ ರಸ ತೆಗೆದಿಟ್ಟುಕೊಂಡಿದ್ದರೆ ಅದನ್ನು ಹಾಕಿಕೊಳ್ಳಬಹುದು. ಈಗ ಇದನ್ನು ಚೆನ್ನಾಗಿ ಕಲಸಿ ಒಂದು ಐದರಿಂದ ಹತ್ತು ನಿಮಿಶ ಬೇಯಿಸಿ ತೆಗೆಯಿರಿ. ಇದರ ಮೇಲೆ ಬೇಕಾದ್ದಲ್ಲಿ ನಿಂಬೆ ಹುಳಿ/ವಿನೆಗರ್ ಚಿಮುಕಿಸಿಕೊಳ್ಳಿರಿ. ಇದನ್ನು ಚೆಂದಕಾಣಿಸಲು ಮೇಲೆ ಕೊತ್ತಂಬರಿ ಸೊಪ್ಪನ್ನು ಹಾಕಿಕೊಳ್ಳಬಹುದು. ಈಗ ಕಾರ ಕಾರ ಕೋಳಿ ಲಿವರ್ ಹುರುಕುಲು/ಪ್ರೈ ಸಿದ್ದವಿದ್ದು ಹುಡಿ ಅನ್ನದ ಜೊತೆ ಸವಿಯಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: