ಗರಿ ಗರಿಯಾದ ಚಿಕನ್ ಕಬಾಬ್

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

  • ಕೋಳಿ – ಅರ‍್ದ ಕೆ.ಜಿ.
  • ಶುಂಟಿ ಬೆಳ್ಳುಳ್ಳಿ ಗಸಿ ಸ್ವಲ್ಪ ಅತವಾ
  • ಶುಂಟಿ – 4 ಇಂಚು
  • ಬೆಳ್ಳುಳ್ಳಿ – 10 ಎಸಳು
  • ಜೋಳದ ಪುಡಿ ( ಕಾರ‍್ನ್ ) – ಸ್ವಲ್ಪ ( ಗರಿ ಗರಿ ಬರಲು )
  • ದನಿಯಾ ಪುಡಿ – 1 ಚಮಚ
  • ಕಬಾಬ್ ಪುಡಿ (ಬೇಕಾದ್ಡಲ್ಲಿ)
  • ಕಾರದ ಪುಡಿ – 2-3 ಚಮಚ
  • ರುಬ್ಬಿದ ಹಸಿಮೆಣಸು – 3 ( ಬೇಕಾದ್ದಲ್ಲಿ )
  • ಉಪ್ಪು ರುಚಿಗೆ ತಕ್ಕಶ್ಟು
  • ಅರಿಶಿಣ – ಸ್ವಲ್ಪ
  • ಮೊಟ್ಟೆಯ ಬಿಳಿ – 1 ಮೊಟ್ಟೆ
  • ಎಣ್ಣೆ – 2 ರಿಂದ 3 ಕಪ್ಪು (ಕರೆದುಕೊಳ್ಳುವಶ್ಟು)

ಚೆಂದಕಾಣಿಸಲು

  • ನಿಂಬೆ ಹಣ್ಣು – 1
  • ಈರುಳ್ಳಿ – 1
  • ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ಬಗೆ

ಮೊದಲಿಗೆ ಕೋಳಿಯ ತುಂಡುಗಳನ್ನು ಚೆನ್ನಾಗಿ ತೊಳೆದುಕೊಂಡು ಅದಕ್ಕೆ ಉಪ್ಪು ಸವರಿ ಒಂದು ತಟ್ಟೆಗೆ ಹಾಕಿಡಿ. ಆಮೇಲೆ ಶುಂಟಿ, ಬೆಳ್ಳುಳ್ಳಿ ಮತ್ತು ಹಸಿಮೆಣಸನ್ನು(ಬೇಕಾದ್ದಲ್ಲಿ) ರುಬ್ಬಿಕೊಳ್ಳಿರಿ. ಆಮೇಲೆ ಒಂದು ತಟ್ಟೆಗೆ ಈ ಶುಂಟಿ ಬೆಳ್ಳುಳ್ಳಿ ಹೂರ‍್ಣ(paste), ಕಾರದ ಪುಡಿ, ದನಿಯಾ ಪುಡಿ (ಕಬಾಬ್ ಪುಡಿ ಹಾಕಿದಲ್ಲಿ ದನಿಯಾ ಪುಡಿ ಕಡಿಮೆ ಹಾಕಿ), ಕಬಾಬ್ ಪುಡಿ(ಬೇಕಾದ್ದಲ್ಲಿ), ಸ್ವಲ್ಪ ಜೋಳದ ಪುಡಿ ( ಕಬಾಬ್ ಗರಿ ಗರಿಯಾಗಲು), ಒಂದು ಮೊಟ್ಟೆಯ ಬಿಳಿ, ಚಿಟಿಕೆ ಅರಿಶಿಣ ಹಾಕಿ ಕಲಸಿಕೊಳ್ಳಿ. ಈಗ ಇದನ್ನು ಕೋಳಿತುಂಡುಗಳಿಗೆ ಚೆನ್ನಾಗಿ ಸವರಿ ಒಂದು 30 ನಿಮಿಶ ಹಾಗೆ ಇಡಿ. ಆಮೇಲೆ ಒಂದು ಬಾಣಲೆಗೆ ಎಣ್ಣೆ ಹಾಕಿ ಅದರಲ್ಲಿ ಗರಿ ಗರಿಯಾಗಿ ಕರೆದು ತೆಗೆಯಿರಿ. ಈಗ ಬಾಯಲ್ಲಿ ನೀರೂರಿಸುವ ಕಬಾಬ್ ತಯಾರಿದ್ದು, ಇದನ್ನು ಚೆಂದಕಾಣಿಸಲು ದುಂಡಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹಣ್ಣಿನ ಹೋಳುಗಳನ್ನು ಅದರ ಸುತ್ತ ಇಡಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: