ಡಿಸೆಂಬರ್ 20, 2022

ಜೇಡರ ದಾಸಿಮಯ್ಯ ವಚನಗಳ ಓದು – 4ನೆಯ ಕಂತು

– ಸಿ.ಪಿ.ನಾಗರಾಜ. ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ ನಿಮ್ಮ ಶರಣರ ಸೂಳ್ನುಡಿಯ ಒಂದರೆಘಳಿಗೆಯಿತ್ತಡೆ ನಿಮ್ಮನಿತ್ತೆ ಕಾಣಾ ರಾಮನಾಥ. ಎಲ್ಲ ಬಗೆಯ ಸಿರಿಸಂಪದಗಳಿಗಿಂತಲೂ ವ್ಯಕ್ತಿಯ ಒಳ್ಳೆಯ ನಡೆನುಡಿಗೆ ಪ್ರೇರಣೆಯನ್ನು ನೀಡುವ ಶಿವಶರಣಶರಣೆಯರ...