ಕವಿತೆ: ಮದುವೆ

– ಸವಿತಾ.

ಮೂರಕ್ಶರದ ಮದುವೆ
ಎರಡು ಹ್ರುದಯಗಳ ಬೆಸುಗೆ

ಪ್ರಾಯಕ್ಕೆ ಬಂದ ಹಸೆಮಣೆ
ವಿದಿವತ್ತಾದ ಆಚರಣೆ

ಒಲವಿಗೆ ಒಲವಾಗಿ, ಒಲವೇ
ಬಲವಾಗಿರಲು ಸಪ್ತ ಹೆಜ್ಜೆ

ಮೂರು ಗಂಟಿಗೆ
ನಂಟಾಗಿ ಪ್ರೀತಿಯ ಕಹಳೆ

ಒಲವಿನೂಟದೀ ಹಬ್ಬದ ಕಳೆ
ಸಡಗರ ಸಂಬ್ರಮಕೇ, ಒಲುಮೆಯ ಕಾಣಿಕೆ

ಒಂದಾದ ಜೋಡಿಗೆ
ಹಿರಿಯರ ಶುಬ ಹಾರೈಕೆ

ಮದುವೆಯೊಂದು ಬಾಳಿಗೆ
ಪ್ರೀತಿ ಪ್ರೇಮದ ಆಸರೆ

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: