ಎಳ್ಳು ಕೊಬ್ಬರಿ ಉಂಡೆ

– ಸವಿತಾ.

ಬೇಕಾಗುವ ಸಾಮಾನುಗಳು

  • ಬಿಳಿ ಎಳ್ಳು – 1 ಲೋಟ
  • ಕರಿ ಎಳ್ಳು – 1 ಲೋಟ (ಕರಿ, ಬಿಳಿ ಯಾವುದಾದರೂ ಸರಿ)
  • ಕಡಲೆ ಬೀಜ (ಶೇಂಗಾ) – 1 ಲೋಟ
  • ಹುರಿಗಡಲೆ (ಪುಟಾಣಿ) – 1/2 ಲೋಟ
  • ಒಣ ಕೊಬ್ಬರಿ ತುರಿ – 1 ಲೋಟ
  • ಗೋಡಂಬಿ – 1/2 ಲೋಟ
  • ಬೆಲ್ಲ – 2.5 ಲೋಟ (ಎರಡೂವರೆ ಲೋಟ)
  • ತುಪ್ಪ – 4 ಚಮಚ
  • ಏಲಕ್ಕಿ – 2

ಮಾಡುವ ಬಗೆ

ಕಡಲೆ ಬೀಜ ಹುರಿದು ಸಿಪ್ಪೆ ತೆಗೆದು ಮಿಕ್ಸರ್ ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ. ಹುರಿಗಡಲೆ ಸ್ವಲ್ಪ ಹುರಿದು ಪುಡಿ ಮಾಡಿ ಇಟ್ಟುಕೊಳ್ಳಿ. ಒಣ ಕೊಬ್ಬರಿ ತುರಿದು ಇಟ್ಟುಕೊಳ್ಳಿ. ಎಳ್ಳು, ಗೋಡಂಬಿ ಸ್ವಲ್ಪ ಬಿಸಿ ಮಾಡಿ ಹುರಿದು ತೆಗೆದು ಪುಡಿ ಮಾಡಿ ಇಟ್ಟುಕೊಳ್ಳಿ. ಒಂದು ಪಾತ್ರೆ ಅತವಾ ಬಾಣಲೆ ಬಿಸಿ ಮಾಡಲು ಇಟ್ಟು, ಎರಡು ಚಮಚ ತುಪ್ಪ ಹಾಕಿ, ಎಲ್ಲಾ ಪುಡಿ ಹಾಕಿ ಮತ್ತು ಬೆಲ್ಲ ಜಜ್ಜಿ ಪುಡಿ ಮಾಡಿ ಹಾಕಿ ತಿರುಗಿಸಿ. ಬೆಲ್ಲ ಕರಗಿದರೆ ಸಾಕು, ಉಳಿದ ತುಪ್ಪ ಸೇರಿಸಿ ಒಲೆ ಆರಿಸಿ. ಏಲಕ್ಕಿ ಪುಡಿ ಮಾಡಿ ಹಾಕಿ, ಒಂದೊಂದೇ ಉಂಡೆ ಕಟ್ಟಿ ಇಡಿ. ಈಗ ಎಳ್ಳು ಕೊಬ್ಬರಿ ಉಂಡೆ (ಸಂಕ್ರಮಣದ ಉಂಡೆ) ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: