ಕವಿತೆ: ಅನುಬಂದ

ರಾಜೇಶ್.ಹೆಚ್.

meditation

ನನ್ನ ಜಗ ನೀನೇ,
ನನ್ನ ಯುಗ ನೀನೇ ,
ಸಮಸ್ತ ಲೋಕದ ಅರಿವು
ನನ್ನ ಪ್ರತಮ ಗುರು ನೀನೇ,
ಸಕಲ ಅರಿವು ನೀನೇ.

ಇದೆಂತ ಅನುಬಂದ- ಈ
ಮಾತಾ- ಪಿತ್ರು- ಮಗುವಿನ- ಸಂಬಂದ
ಎಂದೂ ಅಳಿಸಲಾಗದ ಅನುಬಂದ,
ನೋವು- ನಲಿವಿನ ರುಣಾನುಬಂದ
ಕಳೆದು ಹೋದರೂ ಅಳಿಸಲಾಗದ ಸಂಬಂದ.

ಎಳಸಾದ ಮೂರಂಗುಲದ ಅಸಹಾಯಕ
ಮಾಂಸದ ಮುದ್ದೆಗೆ,
ತ್ಯಾಗ- ಮಮತೆ- ಪ್ರೇಮವ ದಾರೆ-ಎರೆದು
ಶಿಕ್ಶಣ -ಸಂಸ್ಕಾರ ಜ್ಯೋತಿ ಬೆಳಗಿ,

ಸಂತಾನ ಸುಕವೇ ಜೀವನದ ಪರಮ ಗುರಿಯಾಗಿಸಿ
ಹರೆಯದಿಂದ ವ್ರುದ್ದ್ದಾಪ್ಯದವರೆಗೂ
ದಣಿವಿಲ್ಲದೆ ನಿತ್ಯ ದುಡಿಯುತ್ತ ನಡೆದು ಕ್ರುತಾರ‍್ತರಾಗಿ,
ಸಂತಸದಿ ನಲಿದು ಕುಣಿದು ,ಕೊನೆಗೊಂದು ದಿನ
ಇದ್ದುದೆಲ್ಲವ ತೊರೆದು ಪರಮಾತ್ಮನಡೆಗೆ ನಡೆಯುವಾಗ

ನನ್ನ ಜಗ ಕುಸಿಯಿತು, ನನ್ನ ಅಳಿಸಿತು
ಕನಸು ನುಚ್ಚು ನೂರಾಯಿತು
ನನ್ನ ಲೋಕ ಕ್ಶಣಾರ‍್ದದಿ ನುಚ್ಚು ನೂರಾಯಿತು
ಮಗುಚಿತು ಜೀವನದ ಪುಟಗಳು

ಸಾವು ಹೇಳಿತು ಜೀವನ ನಶ್ವರ
ಮರುಗದಿರು ಓ ಜೀವವೇ ಪಟ್ಟು ಆತುರ
ಸಕಲವೂ ನಶ್ವರ – ಜೀವನವು, ಜೀವವೂ
ಅದರೊಂದಿಗಿರುವ ಆತ್ಮ ಮಾತ್ರ ಅಮರ

ದೀಪವೂ ಅವನೇ- ಗಾಳಿಯೂ ಅವನೇ
ಮರಯೆದಿರು, ಅವನೊಂದಿನ ಅನುಬಂದವ!

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: