ಕವಿತೆ: ಅಡಿಯಾಳು

– ರಾಜೇಶ್.ಹೆಚ್.

ಕೊನೆಗೊಳ್ಳುವುದು ಎಂದು ಈ ಬಾಂದವ್ಯ
ಮಾನವನಿಗೆ ಮುಗಿಯದ ಗ್ರುಹಬಂದನ
ಅವನ ನರಳಾಟಕ್ಕಿಲ್ಲ ಎಲ್ಲೂ ಸ್ಪಂದನ

ಪ್ರಕ್ರುತಿಯ ತೀವ್ರ ಕೋಪ – ತಾಪ – ಶಾಪ
ಯಾರಿಗೋ ತಿಳಿಯದು ಹೀಗಿದೆ
ಈ ರೋಗದ ಪ್ರತಾಪ

ಪಾವನ ಗಂಗೆಯಲ್ಲಿ ತೇಲುತ್ತಿವೆ
ಅನಾತ ಶವಗಳು ಬತ್ತಿ ಹೋಗುತ್ತಿವೆ
ಹಲವು ಉರಿಯದ ಚಿತೆಗಳು

ಕೊನೆಗೊಳ್ಳುವುದು ಎಂದೆಂದು? ಕೇಳುತ್ತಿದೆ
ಮಾನವತೆ ಬೆಂದು! ನವಜಾತ ಶಿಶುಗಳು
ಹಲವು ಅನಾತ – ನಿರಾಶ್ರಿತ ಇಂದು

ಸ್ವರ‍್ಗಳಾಗಿದ್ದಳು ದರೆ ನಾವುಗಳಿಗೆ
ಇಂದು ಮುನಿದಿದ್ದಾಳೇಕೆ ದರೆ
ಕೋಪವೇಕೆ ಮಕ್ಕಳಲ್ಲಿ ವಸುದೆ ಇಂದು?

ಯಾವ ದೇವ – ದೈವಗಳೂ ಚಾಚುತಿಲ್ಲ
ಸಹಾಯ ಹಸ್ತ, ಜೀವನಕ್ಕೆ ಹೊರೆಯಾಗಿದ್ದ
ಆಮದು ಶುರುವಾಗಿದೆ ಇಂದು

ಹಸಿವು – ರೋಗ – ಮರಣ
ತಾಂಡವ ಎಲ್ಲೆಲ್ಲೂ ಇಂದು
ಕೊನೆಗೊಳ್ಳುವುದು ಎಂದು?

ಕೇಳುತ್ತಿವೆ, ಸಕಲ ಜೀವಿಗಳು ಇಂದು!
ಬಾಳಬೇಕಾಗಿದೆ ಸ್ವಚ್ಚಂದ ಬಾಳು,
ಮರಣ ಬಾದೆಗೆ ಮಾನವತೆ ಅಡಿಯಾಳು

(ಚಿತ್ರ ಸೆಲೆ: scienceve.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: