ಕವಿತೆ: ಗುರುತು

– .

ಕತ್ತಲಿಗಶ್ಟೆ ಗೊತ್ತು ಯುದ್ದದಲ್ಲಿ
ಗೆದ್ದವರ ಗುರುತು ಮನುಜ
ಚಿತೆಗಶ್ಟೆ ಗೊತ್ತು ಸಶ್ಮಾನದಲ್ಲಿ
ಬೆಂದವರ ಗುರುತು ಮನುಜ

ಸುರಿದ ಸೋನೆಗಶ್ಟೆ ಗೊತ್ತು ಮಳೆಯಲ್ಲಿ
ಕಣ್ಣೀರ ಸುರಿಸಿದವರ ಗುರುತು ಮನುಜ
ಉರಿದ ಬತ್ತಿಗಶ್ಟೆ ಗೊತ್ತು ಬೆಳಕಿನಲ್ಲಿ
ಬಣ್ಣ ಹಚ್ಚಿದವರ ಗುರುತು ಮನುಜ

ಹರಿದ ನದಿಗಶ್ಟೆ ಗೊತ್ತು ಮಡಿಲಲ್ಲಿ
ತಿಳಿನೀರ ಕದಡಿವರ ಗುರುತು ಮನುಜ
ಬಿರಿದ ಬೂಮಿಗಶ್ಪೆ ಗೊತ್ತು ಒಡಲಲ್ಲಿ
ಸಿಡಿ ಮದ್ದುಗಳನಿಟ್ಟವರ ಗುರುತು ಮನುಜ

ಸವೆದ ಚಪಲಿಗಶ್ಟೆ ಗೊತ್ತು ಕಲ್ಲುಮುಳ್ಳುಗಳಲ್ಲಿ
ಕಾಲು ಸವೆಸಿದವರ ಗುರುತು ಮನುಜ
ಮುರಿದ ಮನಸಿಗಶ್ಟೆ ಗೊತ್ತು ಬದುಕಲ್ಲಿ
ಹುಳಿ ಹಿಂಡಿದವರ ಗುರುತು ಮನುಜ

ಮನದ ದರ‍್ಪಣಕ್ಕಶ್ಟೆ ಗೊತ್ತು ತನ್ನೆದುರಲ್ಲಿ
ಮುಕವಾಡ ದರಿಸಿದವರ ಗುರುತು ಮನುಜ
ಜ್ಯೋತಿಪ್ರಿಯ ಶಿವನಿಗಶ್ಟೆ ಗೊತ್ತು ಜಗದಲ್ಲಿ
ತನ್ನಂತೆ ಪರರ ಬಗೆದೊಡೆದವರ ಗುರುತು ಮನುಜ

(ಚಿತ್ರ ಸೆಲೆ: trendsandlife.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: