ಕವಿತೆ: ಶಿವ ಬಂದಾನೊ ಶಿವ ಬಂದಾನೊ

– ಶ್ಯಾಮಲಶ್ರೀ.ಕೆ.ಎಸ್.

ಶಿವ ಬಂದಾನೊ ಶಿವ ಬಂದಾನೊ
ಶಿವರಾತ್ರಿಗೆ ಶಿವ ಬಂದಾನೊ
ಶಿವ ಶರಣರ ಕಾಯ್ವ ನೀಲಕಾಯ
ಲೋಕೋದ್ದಾರಕ ಶಿವ ಬಂದಾನೊ

ಗಂಗಾದರ ಜಟಾದಾರಿ
ಗಜ ಚರ‍್ಮಾಂಬರ ತ್ರಿಶೂಲ ದಾರಿ
ಡಮರುಗ ನುಡಿಸುವ ಬೈರಾಗಿ
ಆದಿಯೋಗಿ ಶಿವ ಬಂದಾನೊ

ಪಂಚಾಮ್ರುತಗಳ ಅಬಿಶೇಕಕ್ಕೆ
ಓಂಕಾರ ವಾಣಿಯ ಸ್ವರಾಮ್ರುತಕ್ಕೆ
ಮಂತ್ರ ಗೋಶಗಳ ಸ್ಮರಣೆಗೆ ಸಂಪ್ರೀತನಾಗಿ
ಕೈಲಾಸ ತಪಸ್ವಿ ಶಿವ ಬಂದಾನೊ

ಬಿಲ್ವಪತ್ರೆ ಪುಶ್ಪಗಳ ಕೋಮಲ ಸ್ಪರ‍್ಶಕೆ
ಶ್ವೇತ ಗಂದ ವಿಬೂತಿಗಳ ಲೇಪನಕೆ
ದೀಪಾರಾದನೆಗೆ ಮೂಕವಿಸ್ಮಿತನಾಗಿ
ನಿರಾಬರಣ ಪ್ರಿಯ ಶಿವ ಬಂದಾನೊ

ಉಪವಾಸ ಜಾಗರಣೆ ವ್ರತಾನಿಶ್ಟೆಗೆ
ಬಕ್ತಿ ಬಾವಗಳ ತನ್ಮಯತೆಗೆ ಒಲಿದು
ಬಕ್ತ ಕುಲಕೋಟಿ ವ್ರುಂದಕೆ ಹರಸಲು
ದೈವಾನುದೇವ ಮಹಾದೇವ ಶಿವ
ದರೆಗಿಳಿದು ಬಂದಾನೊ…

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *