ಕವಿತೆ: ಆ ನಿನ್ನ ನೆನಪು

– ವೆಂಕಟೇಶ ಚಾಗಿ.

ನೆನಪು, Memories

ಮತ್ತೆ ಮತ್ತೆ ಮನದ ಬಳಿ ಸುಳಿಯುತ್ತಿದೆ ಆ ನಿನ್ನ ನೆನಪು
ಮತ್ತೆ ಮತ್ತೆ ಈ ಬದುಕ ಅರಳಿಸುತಿದೆ ಆ ನಿನ್ನ ನೆನಪು

ಮದುರ ನುಡಿಗಳ ಅಪರೂಪದ ಕಜಾನೆ ನೀನು ನನಗೆ
ಮತ್ತೆ ಮತ್ತೆ ನಿನ್ನೊಲವ ಹುಡುಕಿಸುತಿದೆ ಆ ನಿನ್ನ ನೆನಪು

ಸಾಲು ಸಾಲುಗಳಲ್ಲಿ ಬೆರೆತು ಹೋದ ಕಾವ್ಯ ನಮ್ಮ ಪ್ರೀತಿ
ಮತ್ತೆ ಮತ್ತೆ ಆ ಪ್ರೇಮವ ಬಯಸುತಿದೆ ಆ ನಿನ್ನ ನೆನಪು

ಬಿಸಿಯುಸಿರ ಅಲೆಗಳು ಎದೆಯೊಳಗೆ ನುಸುಳಿ ತಾಗಿವೆ
ಮತ್ತೆ ಮತ್ತೆ ಹಿತ ಸ್ಪರ‍್ಶವ ನೀಡುತಿದೆ ಆ ನಿನ್ನ ನೆನಪು

ಮನದ ಅರಮನೆಯೊಳಗೆ ಕವಿಯು ಕವಿತೆ ಬರೆದಾಗಿದೆ
ಮತ್ತೆ ಮತ್ತೆ ಹೊಸ ರಾಗವ ನುಡಿಯುತಿದೆ ಆ ನಿನ್ನ ನೆನಪು

( ಚಿತ್ರಸೆಲೆ : cainellsworth.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: