ಕವಿತೆ: ನೆನಪಿನ ಬುತ್ತಿ

– ರಾಮಚಂದ್ರ ಮಹಾರುದ್ರಪ್ಪ.

ನೆನಪುಗಳು ಸದಾ ರೋಮಾಂಚನವೇ
ಬಳಸಿಕೊಳ್ಳಲು ತಿಳಿದಿರಬೇಕು
ಸಿಹಿನೆನಪುಗಳು ಪುಳಕ ತರುವವು
ಕಹಿನೆನಪುಗಳು ನೋವುಣಿಸಿದರೂ
ಅಮೂಲ್ಯವಾದ ಪಾಟ ಕಲಿಸುವವು
ಈ ಸಿಹಿ-ಕಹಿಗಳ
ಹದಗೊಂಡ ಮಿಶ್ರಣವೇ ಬದುಕು

ಬಾಳಿನ ಪ್ರತಿದಿನವೂ
ನಮ್ಮ ನೆನಪಿನ ಪುಟ ಸೇರುವ
ಒಂದು ಹೊಸ ಹಾಳೆ
ಹಾಳೆಯ ಮೇಲೆ ಗೀಚಿರುವ ಸಂಗತಿ
ಹಿತವೋ-ಅಹಿತವೋ
ನೋವೋ- ನಲಿವೋ
ಒಂದೊಂದು ಹಾಳೆಯೂ
ಒಟ್ಟಾಗಿ ಸೇರಿ ಪುಸ್ತಕವಾಗಲೇಬೇಕು
ಬಾಳಿನ ಪ್ರಯಾಣದುದ್ದಕ್ಕೂ
ಆ ಪುಸ್ತಕದ ಹಾಳೆಯ ತಿರುವಿಹಾಕಿ
ನಮ್ಮ ನೆನಪಿನ ಬುತ್ತಿ ಬಿಚ್ಚಿ ಓದಲೇಬೇಕು.

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: