ಗಜ್ಜರಿ ಚಿತ್ರಾನ್ನ

– ಸವಿತಾ.

ಬೇಕಾಗುವ ಸಾಮಾನುಗಳು

ಗಜ್ಜರಿ (ಕ್ಯಾರೆಟ್) – 2
ಹಸಿ ಮೆಣಸಿನಕಾಯಿ – 4
ಹಸಿ ಕೊಬ್ಬರಿ ತುರಿ – 4 ಚಮಚ
ನಿಂಬೆ ಹಣ್ಣು – 1/2 ಹೋಳು
ತುಪ್ಪ ಅತವಾ ಎಣ್ಣೆ- 4 ಚಮಚ
ಸಾಸಿವೆ – 1/2 ಚಮಚ
ಜೀರಿಗೆ – 1/2 ಚಮಚ
ಕಡಲೇಬೇಳೆ – 1/2 ಚಮಚ
ಗೋಡಂಬಿ – 10
ಒಣ ದ್ರಾಕ್ಶಿ – 10
ಕಡಲೇ ಬೀಜ – 2 ಚಮಚ
ಏಲಕ್ಕಿ – 2
ಚಕ್ಕೆ – 1 ಇಂಚು
ಲವಂಗ – 2
ಹುರಿಗಡಲೆ ( ಪುಟಾಣಿ) – 2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು ರುಚಿಗೆ ತಕ್ಕಶ್ಟು
ಅರಿಶಿಣ – ಸ್ವಲ್ಪ
ಅಕ್ಕಿ – 1 ಲೋಟ

ಮಾಡುವ ಬಗೆ

ಅಕ್ಕಿ ತೊಳೆದು ಅನ್ನ ಮಾಡಿ ಇಟ್ಟುಕೊಳ್ಳಿ. ಕಾಲು ಗಿಟುಕು ಕೊಬ್ಬರಿ ತುರಿದು ಇಟ್ಟುಕೊಳ್ಳಿ. ಏಲಕ್ಕಿ, ಲವಂಗ, ಚಕ್ಕೆ, ಹುರಿಗಡಲೆಯನ್ನು ಬಾಣಲೆಗೆ ಹಾಕಿ ಸ್ವಲ್ಪ ಬಿಸಿ ಮಾಡಿ ತೆಗೆಯಿರಿ. ಆರಿದ ನಂತರ ತೆಂಗಿನ ತುರಿ ಸೇರಿಸಿ ಪುಡಿ ಮಾಡಿ ಇಟ್ಟಿರಿ. ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಕತ್ತರಿಸಿ ಇಟ್ಟುಕೊಳ್ಳಿ. ಗಜ್ಜರಿ ಸಿಪ್ಪೆ ತೆಗೆದು ತುರಿದು ಇಟ್ಟುಕೊಳ್ಳಿ.

ಎರಡು ಚಮಚ ತುಪ್ಪ ಅತವಾ ಎಣ್ಣೆ ಹಾಕಿ ಗೋಡಂಬಿ, ಒಣ ದ್ರಾಕ್ಶಿ, ಕಡಲೇ ಬೀಜ ಹುರಿದು ತೆಗೆದು ಒಂದು ತಟ್ಟೆ ಗೆ ಹಾಕಿಡಿ. ಮತ್ತೊಂದಶ್ಟು ತುಪ್ಪ ಸೇರಿಸಿ ಸಾಸಿವೆ, ಜೀರಿಗೆ, ಕತ್ತರಿಸಿದ ಹಸಿ ಮೆಣಸಿನಕಾಯಿ, ಕಡಲೆ ಬೇಳೆ, ಕ್ಯಾರೆಟ್ ತುರಿ, ರುಬ್ಬಿದ ಕೊಬ್ಬರಿ ಮಿಶ್ರಣ ಒಂದೊಂದೇ ಹಾಕಿ ಚೆನ್ನಾಗಿ ಹುರಿಯಿರಿ. ಉಪ್ಪು ಮತ್ತು ಅರಿಶಿಣ ಹಾಕಿ ಒಲೆ ಆರಿಸಿ. ಅರ‍್ದ ಹೋಳು ನಿಂಬೆ ಹಣ್ಣಿನ ರಸ ಹಾಕಿರಿ. ಹುರಿದ ಗೋಡಂಬಿ, ಒಣ ದ್ರಾಕ್ಶಿ, ಕಡಲೇ ಬೀಜ ಹಾಕಿ ಅನ್ನ ಕಲಸಿ. ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮೇಲೆ ಉದುರಿಸಿ. ಈಗ (ಕ್ಯಾರೆಟ್) ಗಜ್ಜರಿ ಚಿತ್ರಾನ್ನ ಸವಿಯಲು ಸಿದ್ದ .

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: