ಕವಿತೆ: ನಾವು ಕರುಣಾಹೀನರು
ತಪ್ಪು ತಪ್ಪಾದರೂ ಕಂದನ ಒಪ್ಪವಾದ
ನಡಿಗೆಗೆ ಅಪ್ಪನೇ ಆಸರೆ
ನಮ್ಮ ಪ್ರತಿ ಹೆಜ್ಜೆಗೆ
ಅಮ್ಮ ಒತ್ತಾಸೆಯಾದರು ಮನಸಾರೆ
ಅಂದು ನಾವು ಅಕ್ಕರದಿ ಅವರ ಕೈಸೆರೆ
ಬೀಳುತ್ತಿರುವ ನಮಗೆ ಕರ ಹಿಡಿದು
ನಡೆಸಿದ ಕರುಣಾಳು ನೀವು
ನಮ್ಮ ಕಣ್ಣಲ್ಲಿ ಕಂಬನಿ ಮಿಡಿಯದಂತೆ
ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದವರು ನೀವು
ತಮ್ಮ ನೋವಿಗೆ ತೆರೆಮರೆಯಲ್ಲಿ
ಕಣ್ಣೀರಿಟ್ಟು ಯಾರಿಗೂ ಕಾಣದಂತೆ
ಕಣ್ಣೀರು ಒರೆಸಿಕೊಂಡು
ಜಗಕೆ ಮಂದಹಾಸ ಬೀರಿ
ಬದುಕು ಮುನ್ನಡೆಸಿದವರು
ಕಾಲ ಗತಿಸಿ ಅಪ್ಪ ಅಮ್ಮ ನಮ್ಮ
ಕೈಗೂಸಾದಾಗ ತಪ್ಪಿದ ಹೆಜ್ಜೆಗೆ
ಮುಂದೆ ಹೆಜ್ಜೆಯಿಡಲು
ಕೈಯಾಸರೆ ಬೇಡಿದವರು
ಅಂದು ನಾವವರಿಗೆ ಆಸರೆಯಾಗದೆ
ಕೈಕೊಸರಿ ನಿಂತ ಮೀರಿದವರು
ಅವರ ಸಹನೆ ಮೀರಿ
ಕಣ್ಣೀರು ಕೋಡಿಯಾದಾಗ
ನಾವು ಕರುಣಾಹೀನರು, ನಾವು ಕ್ರುತಗ್ನರು
(ಚಿತ್ರ ಸೆಲೆ: www.aeee.gr)
ಇತ್ತೀಚಿನ ಅನಿಸಿಕೆಗಳು