ಕವಿತೆ: ಗುಪ್ತಗಾಮಿನಿ
ಸುಪ್ತ ಮನದ ತಪ್ತ ತಪನಿ
ಸದಾ ನಗೆಯ ಶಾಂತಿದಾಯಿನಿ
ಸಮಸ್ಯೆಗೆ ಸದಾ ಮಂದಹಾಸಿನಿ
ಸಶಕ್ತ ಸಬಲತೆಯ ಸುಹಾಸಿನಿ
ಸದನಕೆ ಮುಕುಟಪ್ರಾಯಿನಿ
ಸಂಸಾರಕೆ ದ್ವೀನೇತ್ರದಾಯಿನಿ
ಸಕುಂಟಬದ ರಕ್ಶಾ ದಾಮಿನಿ
ಸರಸ ಮಾತಿನ ಹಾಸ್ಯ ಬಾಮಿನಿ
ಸರಳ ನಡೆಯ ನೀಳ ಕೇಶಿನಿ
ಸರ‍್ವ ಜೀವದ ಸಂಜೀವಿನಿ
ಸಿಟ್ಟಾದರೆ ನಾಟ್ಯ ರುದ್ರಿ ನೀ
ಸದಾ ಕ್ರುಪೆ ತೋರು ಲೋಕದ ಮಾಯೆ ನೀ
(ಚಿತ್ರ ಸೆಲೆ: artponnada.blogspot.in )
ಇತ್ತೀಚಿನ ಅನಿಸಿಕೆಗಳು