ಕವಿತೆ: ಗುರುವಿರಬೇಕು
ಗುರುವಿರಬೇಕು
ಲೋಕದ ಹಿತಕೆ
ಗುರುವೆಂಬ ದಿವ್ಯ ಶಕ್ತಿ ಇರಬೇಕು
ವಿದ್ಯೆಯೆಂಬ ಬೆಳಕು ಹರಡಲು
ಗುರುವೆಂಬ ಸೂರ‍್ಯನಿರಬೇಕು
ತಾಮಸವೆಂಬ ಕತ್ತಲೆಯ ಅಳಿಸಲು
ಗುರುವೆಂಬ ಜ್ನಾನ ಜ್ಯೋತಿ ಇರಬೇಕು
ಒಳಿತು-ಕೆಡುಕುಗಳ ಅರಿವು ಮೂಡಿಸಲು
ಗುರುವೆಂಬ ಹರಿಕಾರನಿರಬೇಕು
ತಪ್ಪು ಒಪ್ಪುಗಳ ಮನ್ನಿಸಿ
ಸರಿದಾರಿಗೆ ಕರೆದೊಯ್ಯಲು
ಗುರುವೆಂಬ ದಾರಿದೀಪವಿರಬೇಕು
ಗುರಿಯೆಡೆಗೆ ದಿಟ್ಟ ಹೆಜ್ಜೆ ಹಾಕಲು
ಪ್ರೇರಣೆ ನೀಡುವ
ಗುರುವೆಂಬ ಸ್ಪೂರ‍್ತಿಯ ಚಿಲುಮೆ ಇರಬೇಕು
(ಚಿತ್ರ ಸೆಲೆ: pxhere.com)
ಇತ್ತೀಚಿನ ಅನಿಸಿಕೆಗಳು