ಕವಿತೆ: ಮನದಲಿ ನೆಲೆನಿಂತೆ
ನೋಟದಿ ಸೆಳೆಯಲು ನೀ ಬಲ್ಲೆ
ಅದರಿಂದಲೇ ನಿಂತಿಹೆ ನಾನಿಲ್ಲೇ
ಮನದಲಿ ನೆಲೆನಿಂತೆ ನೀ ನಲ್ಲೇ
ಬಿಸಿಲಲಿ ಅಲೆದೆನು ನಿನಗಾಗಿ
ಅಲೆಯುತ ಬಳಲಿದೆ ನಿನಗಾಗಿ
ಚೂರು ದಯೆ ತೋರೆಯ ನನಗಾಗಿ
ಅದೇನೇ ಬರಲಿ ನೆನ್ನೆದುರಿಗೆ
ಓಡಿ ಬರುವೆ ನಿನ್ನ ಕರೆಗೆ
ಮನಸು ಮಾಡು ನೀನು ನನ್ನೆಡೆಗೆ
ಗುಂಡಿಗೆ ಬಡಿದಿದೆ ಬಹು ಬೇಗ
ಉಸಿರನು ಮರೆತಿಹೆ ನಾನೀಗ
ಉಳಿಸು ಈ ಜೀವವ ನೀನೀಗ
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು