ಮಾಡಿ ಸವಿಯಿರಿ ಅಣಬೆ ಬಿರಿಯಾನಿ

ನಿತಿನ್ ಗೌಡ.

ಅಣಬೆ ಬಿರಿಯಾನಿ

ಬೇಕಾಗುವ ಸಾಮಾನುಗಳು:

  • ಅಣಬೆ – 400ಗ್ರಾಂ
  • ಬೆಳ್ಳುಳ್ಳಿ- 14 ಎಸಳು
  • ಶುಂಟಿ – 2 ಇಂಚು
  • ಕಾಯಿ ತುರಿ – ಅರ‌್ದ ಕಪ್ಪು
  • ಹಸಿ ಮೆಣಸು – 6
  • ಪುದೀನ – ಸ್ವಲ್ಪ
  • ಕೊತ್ತಂಬರಿ – ಸ್ವಲ್ಪ
  • ಅರಿಶಿಣ – ಅರ‌್ದ ಚಮಚ
  • ಉಪ್ಪು- ರುಚಿಗೆ ತಕ್ಕಶ್ಟು
  • ತುಪ್ಪು – ಸ್ವಲ್ಪ
  • ಗೋಡಂಬಿ – 7 ರಿಂದ 8
  • ಎಣ್ಣೆ – ಸ್ವಲ್ಪ
  • ಈರುಳ್ಳಿ – 2
  • ಟೊಮೊಟೊ – 3
  • ದನಿಯಾ ಪುಡಿ – 1 ಚಮಚ
  • ಬಾಸ್ಮತಿ ಅಕ್ಕಿ – 1.5 ಲೋಟ ( 4 ಜನಕ್ಕೆ )
  • ಚಕ್ಕೆ – 4-5 ಸಿಪ್ಪೆ
  • ಏಲಕ್ಕಿ – 4
  • ಲವಂಗ – 4
  • ಮರಾಟಿ/ಸ್ಟಾರ್ ಮೊಗ್ಗು – 1
  • ಬಿರಿಯಾನಿ ಎಲೆ – 2

ಮಾಡುವ ಬಗೆ:

ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ‌ ತೊಳೆದಿಟ್ಟುಕೊಳ್ಳಿರಿ. ಆಮೇಲೆ ಅಣಬೆಗಳನ್ನು ಹೋಳುಗಳಾಗಿ ಹೆಚ್ಚಿಟ್ಟುಕೊಳ್ಳಿರಿ.
ಈಗ ಬೆಳ್ಳುಳ್ಳಿ, ಶುಂಟಿ, ಕಾಯಿತುರಿ, ಪುದೀನ, ಕೊತ್ತಂಬರಿ, ಚೂರು ಉಪ್ಪು, ಹಸಿಮೆಣಸು ಇಶ್ಟನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಿರಿ. ಈಗ ಕುಕ್ಕರ್ ಗೆ ಸ್ವಲ್ಪ ತುಪ್ಪ ಮತ್ತು ಸ್ವಲ್ಪ ಎಣ್ಣೆ ಹಾಕಿ, ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಸ್ಟಾರ್ ಮೊಗ್ಗು, ಗೋಡಂಬಿ ಹಾಕಿ ಸ್ವಲ್ಪ ಹುರಿಯಿರಿ. ಈಗ ಇದಕ್ಕೆ ಈರುಳ್ಳಿ ಹಾಕಿ ಕಂದು ಬಣ್ಣ ಬರುವ ವರೆಗೆ ಬಾಡಿಸಿ.

ನಂತರ ರುಬ್ಬಿಟ್ಟುಕೊಂಡ ಮಸಾಲೆ ಹಾಕಿ, ಮಸಾಲೆಯ ಹಸಿಗಮ ಹೋಗುವವರೆಗೆ ಬಾಡಿಸಿ‌. ಈಗ ಇದಕ್ಕೆ ಟೋಮೋಟೋ ಹಾಕಿ , ಅರಿಶಿಣ, ಉಪ್ಪು, ದನಿಯಾಪುಡಿ ಹಾಕಿ 2 ನಿಮಿಶ ಬಾಡಿಸಿ‌.‌ ಈಗ ಇದಕ್ಕೆ ಅಣಬೆ ಹೋಳುಗಳನ್ನು ಹಾಕಿ 3 ನಿಮಿಶ ಬಾಡಿಸಿ. ನಂತರ ನೆನೆಸಿಟ್ಟುಕೊಂಡ ಬಾಸ್ಮತಿ ಅಕ್ಕಿಯನ್ನು ಹಾಕಿರಿ. ಈಗ ಇದಕ್ಕೆ 2 ಲೋಟ ನೀರು ಹಾಕಿ, ಕುಕ್ಕರ್ ಮುಚ್ಚಳ ಮುಚ್ಚಿರಿ. ಒಂದು ಬಾರಿ ವಿಶಲ್ ಬಳಿ ಹಬೆ ಬಂದೊಡನೆ, ವಿಶಲ್ ಹಾಕಿ ಒಂದು ಸೀಟಿ ಹೊಡೆಸಿರಿ. ಈಗ ಇದು ತಣ್ಣಗಾದ ಮೇಲೆ, ಬಿರಿಯಾನಿ ಮಸಾಲೆ ಮತ್ತು ಅನ್ನವನ್ನು ಚೆನ್ನಾಗಿ ಕಲಸಿರಿ. ಈಗ ಇದಕ್ಕೆ ಪುದೀನ ಎಲೆ, ಕೊತ್ತಂಬರಿ , ಈರುಳ್ಳಿ ನಿಂಬೆಹಣ್ಣನ್ನು ಇಟ್ಟು ಚೆಂದ ಕಾಣಿಸಬಹುದು. ಬೇಕಾದಲ್ಲಿ ಈರುಳ್ಳಿ, ಟೊಮೊಟೊ, ಹಸಿಮೆಣಸು ಹೆಚ್ಚಿ ಮೊಸರಿಗೆ ಹಾಕಿ ಮೊಸರು ಬಜ್ಜಿಯೊಂದಿಗೆ ಕೂಡಾ ಸವಿಯಬಹುದು‌.

( ಚಿತ್ರಸೆಲೆ: ಬರಹಗಾರರು )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks