ಸರಳವಾದ ಮನೆಮದ್ದುಗಳು
(ಈ ಮನೆಮದ್ದುಗಳು ಮಾಹಿತಿ ಉದ್ದೇಶಕ್ಕಾಗಿ ಮಾತ್ರ; ಇದನ್ನು ವೈದ್ಯಕೀಯ ಸಲಹೆ ಇಲ್ಲವೇ ವೈದ್ಯಕೀಯ ಸಲಹೆಗೆ ಬದಲಿ ಎಂದು ಪರಿಗಣಿಸಕೂಡದು. ಯಾವುದೇ ಹೊಸ ಚಿಕಿತ್ಸೆಯನ್ನು ಪ್ರಯತ್ನಿಸುವ ಮೊದಲು ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್‍ಕಿಸಿ.)
ಹಿಂದಿನ ಕಾಲದಲ್ಲಿ ಇಂದಿನ ದಿನಗಳ ಮಾದರಿಯಲ್ಲಿ ವೈದ್ಯಕೀಯ ವ್ಯವಸ್ತೆ ಇರದಿದ್ದರಿಂದ, ಸಣ್ಣ ಪುಟ್ಟ ಕಾಯಿಲೆಗಳಿಗೆ ಮನೆ ಮದ್ದುಗಳನ್ನೇ ಜನರು ಬಳಸುತ್ತಿದ್ದರು. ಅಂತಹ ಮನೆ ಮದ್ದುಗಳು ಇಂದಿಗೂ ಸೂಕ್ತ. ಅಂತಹುದೇ ಅಂದಿನ ಮತ್ತು ಇಂದಿನ ಕೆಲವು ಮನೆಮದ್ದುಗಳನ್ನು ನೋಡೋಣ.
1. ಕೆಮ್ಮು ಮತ್ತು ಕಪ ಕಡಿಮೆ ಆಗಲು:
ಸಿಪ್ಪೆ ಸುಲಿದ ಅರ‍್ದ ಈರುಳ್ಳಿ ಸುಟ್ಟು; ಅರ‍್ದ ಇಂಚು ಶುಂಟಿ ಸೇರಿಸಿ ಜಜ್ಜಿ ಹಿಂಡಿ ರಸ ತೆಗೆದಿಡಿ. ನಂತರ ಆ ರಸಕ್ಕೆ ಒಂದು ಚಮಚ ಜೇನು ತುಪ್ಪ ಸೇರಿಸಿ ಸವಿದರೆ ಕೆಮ್ಮು ಮತ್ತು ಕಪ ಕಡಿಮೆ ಆಗುವುದು.
2. ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೆ:
ಚೆನ್ನಾಗಿ ಕುಟ್ಟಿ ಪುಡಿಮಾಡಿದ ಒಂದು ಚಮಚ ಅಜ್ವೈನವನ್ನು, ಒಂದು ಗ್ಲಾಸ್ ಮಜ್ಜಿಗೆಗೆ ಸೇರಿಸಿ, ಉಪ್ಪನ್ನು ಬೆರೆಸಿ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಿಸಬಹುದು.
3. ಬೊಜ್ಜು ನಿವಾರಣೆಗೆ:
ಒಂದು ಬಟ್ಟಲು ಸಣ್ಣಗೆ ಕತ್ತರಿಸಿದ ಬೂದುಗುಂಬಳದ ತುಂಡುಗಳನ್ನು ಮಿಕ್ಸರ್ ಗೆ ಹಾಕಿ, ಒಂದು ಹಿಡಿ ತೊಳೆದಿಟ್ಟ ಪುದೀನಾ ಎಲೆಗಳು, ಅರ‍್ದ ಚಮಚ ಮೆಣಸಿನ ಪುಡಿ, ಅರ‍್ದ ಚಮಚ ಜೀರಿಗೆ ಪುಡಿ, ಒಂದು ಚಮಚ ಉಪ್ಪು, ಸ್ವಲ್ಪ ಮೊಸರು ಸೇರಿಸಿ ಚೆನ್ನಾಗಿ ರುಬ್ಬಿ ನಿತ್ಯವೂ ಕುಡಿಯುತ್ತ ಬಂದರೆ ಬೊಜ್ಜಿನ ಸಮಸ್ಯೆಯನ್ನು ನಿವಾರಿಸಬಹುದು.
4.ಮುಕದ ಸುಕ್ಕು ತಡೆಯಲು :
ಅರ‍್ದ ಬಟ್ಟಲು ಓಟ್ಸ್ ಜೊತೆ ಸ್ವಲ್ಪ ಹಾಲು ಮತ್ತು ನೀರು ಬೆರೆಸಿ ಪೇಸ್ಟ್ ಮಾಡಿ ಮುಕಕ್ಕೆ ಆಗಾಗ್ಗೆ ಲೇಪಿಸುವುದರಿಂದ ಬೇಗ ಸುಕ್ಕುಗಟ್ಟುವುದನ್ನು ತಡೆಹಿಡಿಯಬಹುದು.
5. ಚೆನ್ನಾಗಿ ನಿದ್ದೆ ಬರಲು:
ಮಲಗುವ ವೇಳೆ ಗಸಗಸೆ ಹಾಲು ಅತವಾ ಗಸಗಸೆ ಪಾಯಸ ಕುಡಿದರೆ ನಿದ್ರೆ ಆವರಿಸುತ್ತದೆ.
ಹಣ್ಣಾದ ಪಚ್ಚಬಾಳೆಹಣ್ಣಿನ ಸಿಪ್ಪೆಯನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಒಂದು ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಸ್ವಲ್ಪ ತಣ್ಣಗಾದ ಬಳಿಕ ಸೋಸಿಟ್ಟ ನೀರನ್ನು ಕುಡಿಯುವುದರಿಂದ ನಿದ್ದೆ ತಾನಾಗಿಯೇ ಬರುವುದು.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು