ಕವಿತೆ: ನಮಿಪೆವು ತಾಯೇ

– ಶ್ಯಾಮಲಶ್ರೀ.ಕೆ.ಎಸ್.

 

ನಮಿಪೆವು ತಾಯೇ
ಶಿರಬಾಗಿ ನಿನಗೆ
ಬಕುತರ ಹರಸೆಯಾ
ಅರಸಿಬರುವ ಬಕ್ತಜನರ
ಮೊರೆಯ ಆಲಿಸಿ
ವರವ ಕರುಣಿಸೆಯಾ

ನವರಾತ್ರಿಯಲಿ ಅವತರಿಪ
ಶಕ್ತಿ ಸ್ವರೂಪಿ ಮಾತೆಯೇ
ದೀನರ ಕಂಬನಿ ಒರೆಸೆಯಾ
ತಮವ ಓಡಿಸಿ
ಅರಿವ ಮೂಡಿಸಿ
ಜಗದ ಕಣ್ಣು ತೆರೆಸೆಯಾ

ಸರ‍್ವಶಕ್ತೇ ಸರ‍್ವಪೂಜಿತೇ
ಬವದ ಬಾದೆ ತಣಿಸಿ
ಸುಕ ನೆಮ್ಮದಿ ನೀಡೆಯಾ
ಎರಗುವೆವು ತಾಯೇ
ನಿನ್ನ ಚರಣಕೆ
ಬದುಕಿನ ಬವಣೆ ಕಳೆವೆಯಾ

ಆಯುದಗಳ ಪಿಡಿದು
ಅಲಂಕರಿಸಿರುವ ತಾಯೇ
ಅಬೀಶ್ಟಗಳ ಪೂರೈಸೆಯಾ
ದಿಟ್ಟತನದಿ ದುಶ್ಟರ ಮಣಿಸಿದ
ವಿಜಯಲಕುಮಿ ದೇವಿಯೇ
ಶಿಶ್ಟರ ಪೊರೆವೆಯಾ
ಬಾಳಿಗೆ ಸಮ್ರುದ್ದಿಯ
ತರುವೆಯಾ

(ಚಿತ್ರಸೆಲೆ: kstdc.co )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *