ಹಸಿರು ಹೊದ್ದ ಲಾಲ್ಬಾಗ್

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).

ಅಲ್ಲಿಶ್ಟು ಇಲ್ಲಿಶ್ಟು ಬೆಳಕು ಚೆಲ್ಲುತ ಬರುತಿಹನು ಬಾಸ್ಕರ
ಹಸಿರು ಹೊದ್ದ ಲಾಲ್ಬಾಗ್ ಈಗೆಶ್ಟು ಸುಂದರ
ಸ್ವಚ್ಚಂದವಾಗಿ ಹಾರಾಡುವ ಹಕ್ಕಿ ಪಕ್ಶಿಗಳ ಇಂಚರ
ತಿಳಿ ನೀರಿನಲ್ಲಿ ಮೀನುಗಳ ಸಂಚಾರ

ಪೈಪೋಟಿಯಂತೆ ಬೆಳೆದಿರುವ ಮರ ಗಿಡಗಳು
ಸದಾ ತಬ್ಬಿಕೊಂಡಿರುವ ಹಸಿರು ಬಳ್ಳಿಗಳು
ಕ್ಯಾಮರ ಇಲ್ಲದೆ ನಗುವ ಸುಂದರ ಹೂಗಳು
ಚಂಗನೆ ಓಡುವ ಗಾಬರಿಯ ಅಳಿಲುಗಳು
ಮೆಲ್ಲಮೆಲ್ಲನೆ ಈಜಾಡುವ ಕೊಕ್ಕರೆಗಳು

ಎಶ್ಟು ಸುಂದರ ದೇವರ ಈ ಪ್ರಕ್ರುತಿಯ ಸ್ರುಶ್ಟಿ
ಬೀಳದಿದ್ದರೆ ಸಾಕು ಇಲ್ಲಿ ರಾಜಕಾರಣಿಗಳ ದ್ರುಶ್ಟಿ
ಎಶ್ಟು ನೋಡಿದರು ಸಾಲದು ಈ ರಮ್ಯ ತಾಣ
ಒಂದಲ್ಲ ಒಂದು ರೀತಿಯಲ್ಲಿ ಆಗಿದೆ ಎಲ್ಲರಿಗೂ ಪ್ರೇರಣೆ

ಹಸಿರು ಹೊದ್ದು ಮಲಗಿದಂತಿದೆ ಬೂತಾಯಿ ಎಲ್ಲೆಲ್ಲೂ
ಸಾದ್ಯವೇ ಇಲ್ಲ ನೋಡಲು ಬೆಂಗಳೂರಿನಲ್ಲಿ ಇನ್ನೆಲ್ಲೂ
ಶಾಂತ ಮೌನ ಮೂಡಿಸಿದೆ ಒಮ್ಮೆಲೆ ನನ್ನಲ್ಲೂ
ಒಳ್ಳೆ ಆರೋಗ್ಯ ಕಂಡಿತ ಇಲ್ಲಿ ನಡೆದಾಡಲು

ಮೂಡುತಲೇ ಇವೆ ಹಿಡಿದಿಡಲಾಗದ ಬಾವನೆಗಳು
ಬರೆಯಲು ಕುಳಿತೆ ತಡಕಾಡುತ್ತ ಕವಿತೆ ಸಾಲುಗಳು
ಕಾದಿವೆ ನನಗಾಗಿ ಸುಂದರ ನಾಳೆಗಳು
ಬನ್ನಿ ನೋಡಿ ತಣಿಸಿಕೊಳ್ಳಲಿ ನಿಮ್ಮ ಕಣ್ಗಳು

(ಚಿತ್ರ ಸೆಲೆ: reddit.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: