ಕವಿತೆ: ಆಕೆ

– .

ಕೋಲ್ಮಿಂಚಿನಂತ ಕಣ್ನೋಟದಾಕೆ
ಕೆಂದಾವರೆಯಂದದ ಗಲ್ಲದಾಕೆ
ಕಾರ‍್ಮುಗಿಲಂಗ ಕುಡಿಯುಬ್ಬಿನಾಕೆ
ಕಾಮನಬಿಲ್ಲಿನಂಗ ಕೆನ್ನೆಯಾಕೆ

ಮಂದಾರ ಹೂವಿನಂಗ ವದನದಾಕೆ
ಮಾಮರ ಕೋಗಿಲೆಯಂಗ ಕಂಟದಾಕೆ
ನೇಸರನಂಗ ಸುಡುವ ಕೋಪದಾಕೆ
ಚಂದಿರನಂಗ ಕಾಡುವ ರೂಪದಾಕೆ

ಅರಗಿಳಿಯಂಗ ನೀಳ ನಾಸಿಕದಾಕೆ
ಕರಾವಳಿಯಂಗ ಆಳ ಮನದಾಕೆ
ಮಕರಂದ ಸಿಹಿಯ ತುಟಿಯುಳ್ಳವಳಾಕೆ
ಮಂಕು ಹಿಡಿಸೋ ಗನಿಗಟಿಯುಳ್ಳವಳಾಕೆ

ಅಂದಕ್ಕೊಪ್ಪುವ ಅಬರಣಗಳ ಮೆರುಗಿನಾಕೆ
ಚೆಂದಕ್ಕೊಪ್ಪುವ ಕೈಬಳೆಗಳ ಸೊಬಗಿನಾಕೆ
ಕನಸಲ್ಲೂ ಗಲ್ಲಗಲ್ಲವೆನ್ನೋ ಗೆಜ್ಜೆಯಾಕೆ
ಮನಸೆಲ್ಲ ಜೆಲ್ಲಜೆಲ್ಲವೆನ್ನೋ ಲಜ್ಜೆಯಾಕೆ

ಜೀವದ ಗೆಳೆತಿಯಾದವಳಾಕೆ
ಜೀವನದ ಸಂಗಾತಿಯಾದವಳಾಕೆ
ಜೀವನಕ್ಕೆ ಜ್ಯೋತಿಯಾದವಳಾಕೆ
ಶಿವನ ಬಾಳಿನ ಉಸಿರಾದವಳಾಕೆ

(ಚಿತ್ರ ಸೆಲೆ: artponnada.blogspot.in)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *