ಮಾಡಿ ನೋಡಿ ರುಚಿಯಾದ ಮೊಸರನ್ನ

– ನಿತಿನ್ ಗೌಡ.

ಏನೇನು ಬೇಕು ?

  • ಮೆತ್ತನೆಯ ಅನ್ನ – 2 ಕಪ್ಪು
  • ಮೊಸರು – 2 ಕಪ್ಪು
  • ಸಾಸಿವೆ – 1 ಚಮಚ
  • ಕಡಲೆ ಬೇಳೆ –  1 ಚಮಚ
  • ಉದ್ದಿನ ಬೇಳೆ – 1 ಚಮಚ
  • ಕರಿಬೇವು – ಸ್ವಲ್ಪ
  • ಕೊತ್ತಂಬರಿ – ಸ್ವಲ್ಪ
  • ಶುಂಟಿ ತುರಿ – 1 ಇಂಚು
  • ದಾಳಿಂಬೆ (ಬೇಕಾದರೆ)
  • ಹಾಲು (ಬೇಕಾದರೆ)
  • ಉಪ್ಪು
  • ಎಣ್ಣೆ ( ಒಗ್ಗರೆಣೆಗೆ ತಕ್ಕಶ್ಟು )
  • ಬ್ಯಾಡಗಿ ಮೆಣಸು – 2 ರಿಂದ 3
  • ಗೋಡಂಬಿ – 8 ಪೀಟ
  • ಇಂಗು – ಚಿಟಿಕೆ

ಮಾಡುವ ಬಗೆ:

.ಮೊದಲಿಗೆ ಅನ್ನವನ್ನು ಮೆತ್ತಗೆ,ನುಣುವಾಗಿ ಮಾಡಿಕೊಳ್ಳಬೇಕು. ಈಗ ಒಂದು ಬಾಣಲೆಗೆ ಎಣ್ಣೆ ಹಾಕಿರಿ. ಈಗ ಇದಕ್ಕೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಬ್ಯಾಡಗಿ ಮೆಣಸು ಹಾಕಿ ಕೊಂಚ ಬಾಡಿಸಿ. ಆಮೇಲೆ ಇದಕ್ಕೆ ಕರಿಬೇವು, ಶುಂಟಿ ತುರಿ, ಗೋಡಂಬಿ ಹಾಕಿ ಹೊಂಬಣ್ಣ ಬರುವ ವರೆಗೆ ಬಾಡಿಸಿ. ಈಗ ಇದಕ್ಕೆ ಚಿಟಿಕೆ ಇಂಗು ಮತ್ತು ಅನ್ನವನ್ನು ಹಾಕಿ ಚೆನ್ನಾಗಿ ನುರಿಯಿರಿ. ನಂತರ ಇದಕ್ಕೆ ಮೊಸರನ್ನು ಕೊಂಚ ಕೊಂಚವೇ ಹಾಕಿ ಕಲಸಿ. ಮೊಸರು ಹುಳಿಯಿದ್ದಲ್ಲಿ ಹಾಲನ್ನು ಹಾಕಿಕೊಳ್ಳಬಹುದು. ಈಗ ಇದಕ್ಕೆ ರುಚಿಗೆ ತಕ್ಕಶ್ಟು ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ದಾಳಿಂಬೆಯನ್ನು ಹಾಕಿ ಕಲಸಿಕೊಳ್ಳಿರಿ. ಈಗ ರುಚಿ ರುಚಿಯಾದ ಮೊಸರನ್ನು ತಯಾರಾಗಿದೆ.

(ಚಿತ್ರಸೆಲೆ: unsplash.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: