ಕವಿತೆ: ಮತ್ತೆ ಬರುವೆಯಾ

– ವೆಂಕಟೇಶ ಚಾಗಿ.

ನಿನ್ನ ನೆನಪುಗಳಿಗೆ ಇಲ್ಲ ಬರ
ಎಶ್ಟೋ ದಿನಗಳು ಉರುಳಿದವು
ಎಶ್ಟೋ ಗಂಟೆಗಳು ಕಳೆದವು
ಎಶ್ಟೋ ನೆನಪುಗಳು ಮರೆತು ಹೋದವು
ಹಾಗೆಯೇ ಉಳಿದಿವೆ ನಿನ್ನ ನೆನಪುಗಳು ಪಳೆಯುಳಿಕೆಯಂತೆ

ಮನದೊಳಗಿನ ಆ ಆತಂಕ
ಇನ್ನೂ ಕಡಿಮೆಯಾಗಿಲ್ಲ
ನೀನು ಮರೆಯಾದರೂ
ಮನಸಿನೊಳಗೆ ಮರೆಯಾಗಿಲ್ಲ
ಆ ಕುಶಿಯೇ ಮನದೊಳಗೆ ರಿಂಗಣಿಸಿದೆ
ಆ ನೆಮ್ಮದಿಯ ಮನಸು ಬಯಸುತಿದೆ
ಕಾಲವು ಕಾಣೆಯಾಗಿಲ್ಲ
ಈ ಮನಸು ಮುದಿಯಾಗಿಲ್ಲ

ಎತ್ತ ಹೋದರೂ ನೆನಪುಗಳ ಹಂದರವೇ
ಕಣ್ಣಿಗೆ ಕಾಣುತಿದೆ ಆ ಬೆಳಕು
ಆ ಸೂರ‍್ಯ ಈಗಲೂ ಇದ್ದಾನೆ
ನನ್ನ ನಿನ್ನ ಹುಡುಕುತಿರುವನು
ನೀನೆಲ್ಲೋ ನಾನಲ್ಲೆ
ಆ ರವಿಯು ತಂಪಾಗಿ
ಗಾಳಿಯು ಇಂಪಾಗಿ
ಮತ್ತೆ ಆ ಕ್ಶಣಗಳ ನೆನಪಿಸುತಿವೆ

ಕಡಲಿನ ದಂಡೆಯ ಮೇಲೆ
ನಿನ್ನ ಹೆಸರು ಮತ್ತೆ ಮತ್ತೆ ಮೂಡುತಿದೆ
ಅಲೆಗಳು ಅಳುಕಿಸಲು ಅಸಮರ‍್ತ
ಆ ದಿನದ ಕವನವನ್ನು ಅವು ಇನ್ನೂ ಮರೆತಿಲ್ಲ
ಆ ದಿನದ ಹಾಡು ಅಲ್ಲಿಯೇ ದ್ಯಾನಿಸುತಿದೆ
ಯಾವುದೋ ಒಂದು ತೆರೆಯು ತವಕಿಸುತಿದೆ
ಮತ್ತೆ ಬರುವೆಯಾ…
ಮತ್ತೆ ಬರುವೆಯಾ…

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *