ಜೋಳದ ರೊಟ್ಟಿ, ಚಪಾತಿ ಜೊತೆ ಸವಿಯಿರಿ ಮೂಲಂಗಿ ಪಲ್ಯ

– ಸವಿತಾ.

ಬೇಕಾಗುವ ಸಾಮಾನುಗಳು

  • ಮೂಲಂಗಿಕಾಯಿ – 1/4 ಕಿಲೋ
  • ಬೆಳ್ಳುಳ್ಳಿ ಎಸಳು – 8
  • ಹಸಿ ಮೆಣಸಿನ ಕಾಯಿ – 2 ಅತವಾ 3
  • ಹುಣಸೆ ರಸ – 1 ಚಮಚ
  • ಬೆಲ್ಲ – 1 ಚಮಚ
  • ಉಪ್ಪು ರುಚಿಗೆ ತಕ್ಕಶ್ಟು
  • ಅರಿಶಿಣ ಸ್ವಲ್ಪ
  • ಎಣ್ಣೆ – 2 ಚಮಚ
  • ಗುರೆಳ್ಳು ಪುಡಿ – 2 ಚಮಚ
  • ಎಳ್ಳಿನ ಪುಡಿ – 1 ಚಮಚ
  • ಕರಿಬೇವು ಸ್ವಲ್ಪ
  • ಸಾಸಿವೆ – 1/2 ಚಮಚ
  • ಜೀರಿಗೆ – 1/2 ಚಮಚ
  • ಇಂಗು ಸ್ವಲ್ಪ
  • ಸೋಂಪು ಕಾಳು – 1/2 ಚಮಚ

ಮಾಡುವ ಬಗೆ

ಮೊದಲಿಗೆ ಮೂಲಂಗಿ ಕಾಯಿ ನೀರಿನಲ್ಲಿ ತೊಳೆದಿಟ್ಟುಕೊಳ್ಳಿರಿ. ಆಮೇಲೆ ಅದರ ಎರಡೂ ಬದಿ ಕೊಂಚ ಕತ್ತರಿಸಿ ತೆಗೆಯಿರಿ. ನಂತರ ಅದರ ನಡುವಿನ ಬಾಗ ಕೈಯಿಂದ ಮುರಿದು ಬಾಣಲೆಗೆ ಹಾಕಿರಿ. ಸ್ವಲ್ಪ ಎಣ್ಣೆ ಹಾಕಿಕೊಂಡು ಹುರಿದು ಒಂದು ತಟ್ಟೆಯಲ್ಲಿ ತೆಗೆದಿಡಿ. ಅದೇ ಬಾಣಲೆಗೆ ಉಳಿದ ಎಣ್ಣೆ ಹಾಕಿ ಬಿಸಿ ಮಾಡಿ; ಸಾಸಿವೆ, ಜೀರಿಗೆ, ಇಂಗು, ಸೋಂಪು ಕಾಳು, ಕರಿ ಬೇವು, ಬೆಳ್ಳುಳ್ಳಿ ಮತ್ತು ಎಸಳು ಹಸಿ ಮೆಣಸಿನ ಕಾಯಿ ಅರೆದು ಹಾಕಿ ಸ್ವಲ್ಪ ಹುರಿಯಿರಿ. ನಂತರ ಹುರಿದಿಟ್ಟ ಮೂಲಂಗಿ ಕಾಯಿ ಹಾಕಿ. ಉಪ್ಪು ಅರಿಶಿಣ ಹಾಕಿ ಚೆನ್ನಾಗಿ ಹುರಿದು ನೀರು ಹಾಕಿ ಚೆನ್ನಾಗಿ ಕುದಿಸಿ ನಂತರ ಗುರೆಳ್ಳು ಪುಡಿ, ಎಳ್ಳಿನ ಪುಡಿ, ಹುಣಸೆ ರಸ ಬೆಲ್ಲ ಹಾಕಿ ತಿರುಗಿಸಿ ಇಳಿಸಿ. ಈಗ ಮೂಲಂಗಿ ಕಾಯಿ ಪಲ್ಯ ಸವಿಯಲು ಸಿದ್ದ. ಜೋಳದ ರೊಟ್ಟಿ, ಚಪಾತಿ ಜೊತೆ ಸವಿಯಲು ಚೆನ್ನಾಗಿರುತ್ತದೆ.

(ಚಿತ್ರಸೆಲೆ: ಬರಹಗಾರರು)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: