ಕವಿತೆ: ಕರುನಾಡ ಹಬ್ಬ

– ಶ್ಯಾಮಲಶ್ರೀ.ಕೆ.ಎಸ್.

ಬಂದಿದೆ ಕರುನಾಡ ಹಬ್ಬ
ಸಡಗರದ ರಾಜ್ಯೋತ್ಸವಕೆ
ಕನ್ನಡಮ್ಮನ ತೇರನೆಳೆವ ಹಬ್ಬ
ಕನ್ನಡಿಗರೆಲ್ಲಾ ಒಂದಾಗಿ
ಸಂಬ್ರಮದಿ ನಲಿವ ಹಬ್ಬ

ಕನ್ನಡ ನೆಲ ಜಲದಲಿ
ಕಳೆ ತುಂಬುವ ಹಬ್ಬ
ಎಲ್ಲೆಲ್ಲೂ ಕನ್ನಡದ ಕಲರವ
ಮೂಡುವ ಹಬ್ಬ
ಕನ್ನಡದ ಕಂಪ ತಾ
ಹರಡುವ ಹಬ್ಬ

ನಾಡು ನುಡಿಯ
ಉಳಿಸಿ ಬೆಳೆಸುವ ಹಬ್ಬ
ಎಲ್ಲೆಡೆ ಕನ್ನಡದ
ಹಿರಿಮೆಯ ಸಾರುವ ಹಬ್ಬ
ಕನ್ನಡಿಗರಲಿ ಬಾಂದವ್ಯ
ಬೆಸೆಯುವ ಹಬ್ಬ

ಹಸಿರಾಗಲಿ ಕನ್ನಡ
ಉಸಿರಾಗಲಿ ಕನ್ನಡ
ಚಿರವಾಗಲಿ ಕನ್ನಡ
ಕನ್ನಡದ ಜಯಬೇರಿ
ಎಂದೆಂದೂ ಮೊಳಗಲಿ ಬೆಳಗಲಿ

(ಚಿತ್ರ ಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *