ಬೂದು ಕುಂಬಳಕಾಯಿ ಕೀರು
– ಸವಿತಾ.
ಏನೇನು ಬೇಕು
- ಬೂದು ಕುಂಬಳಕಾಯಿ – 1/4 ಬಾಗ
- ಸಣ್ಣ ರವೆ – 3 ಚಮಚ
- ತುಪ್ಪ – 3 ಚಮಚ
- ಬಾದಾಮಿ – 2
- ಗೋಡಂಬಿ – 6
- ಒಣ ದ್ರಾಕ್ಶಿ – 10
- ಏಲಕ್ಕಿ – 2
- ಬೆಲ್ಲ – 8 ಚಮಚ
- ಹಾಲು – 1/4 ಲೀಟರ್
- ಕೇಸರಿ ದಳ – 4
ಮಾಡುವ ಬಗೆ
ಬೂದು ಕುಂಬಳಕಾಯಿ ತೊಳೆದು ಕಾಲು ಬಾಗ ಕತ್ತರಿಸಿ, ಬೀಜ ತೆಗೆದು, ಕುಕ್ಕರ್ ನಲ್ಲಿ ನಾಲ್ಕು ಕೂಗು ಕೂಗಿಸಿ ಇಟ್ಟುಕೊಳ್ಳಿ. ಬೇಯಿಸಿದ ಬೂದು ಕುಂಬಳಕಾಯಿ ಸಿಪ್ಪೆ ತೆಗೆದು, ಮಿಕ್ಸರ್ ನಲ್ಲಿ ಒಂದು ಸುತ್ತು ತಿರುಗಿಸಿ. ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ, ಬಾದಾಮಿ, ಗೋಡಂಬಿ, ಒಣ ದ್ರಾಕ್ಶಿ ಸೇರಿಸಿ ಹುರಿದು ಒಂದು ತಟ್ಟೆಗೆ ತೆಗೆದು ಇಟ್ಟುಕೊಳ್ಳಿ. ಅದೇ ಬಾಣಲೆಗೆ ಇನ್ನೊಂದು ಚಮಚ ತುಪ್ಪ ಹಾಕಿ ರವೆ ಹುರಿದು ತೆಗೆಯಿರಿ. ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ, ರುಬ್ಬಿದ ಬೂದು ಕುಂಬಳಕಾಯಿ ಮತ್ತು ಸ್ವಲ್ಪ ನೀರು ಸೇರಿಸಿ. ಸ್ವಲ್ಪ ಬಿಸಿ ಆದ ಹಾಗೇ, ರವೆ ಸೇರಿಸಿ ಒಮ್ಮೆ ಚೆನ್ನಾಗಿ ತಿರುಗಿಸಿ ಹಾಲು, ಕೇಸರಿ ದಳ ಹಾಕಿ ಒಂದು ಕುದಿ ಕುದಿಸಿ. ನಂತರ ಬೆಲ್ಲ ಹಾಕಿ ಕೈಯಾಡಿಸಿ. ಬೆಲ್ಲ ಕರಗಿದ ಮೇಲೆ ಕೊನೆಗೆ ಹುರಿದ ಬಾದಾಮಿ, ಗೋಡಂಬಿ, ಒಣ ದ್ರಾಕ್ಶಿ ಮತ್ತು ಪುಡಿಮಾಡಿದ ಏಲಕ್ಕಿ ಹಾಕಿ ಒಲೆ ಆರಿಸಿ. ಆರೋಗ್ಯಕರ ಬೂದು ಕುಂಬಳಕಾಯಿ ಕೀರು ಸವಿಯಿರಿ
ಇತ್ತೀಚಿನ ಅನಿಸಿಕೆಗಳು