ಅವಲಕ್ಕಿ ಹವೆಗಡುಬು
– ಸವಿತಾ.
ಬೇಕಾಗುವ ಸಾಮಾನುಗಳು
ಅವಲಕ್ಕಿ – 3 ಲೋಟ
ಗೋದಿ ರವೆ – 1 ಲೋಟ
ಹಸಿಮೆಣಸಿನಕಾಯಿ – 1
ಗೋಡಂಬಿ – 4
ಶೇಂಗಾ/ಕಡಲೇಬೀಜ – 1 ಚಮಚ
ಸಾಸಿವೆ – 1/4 ಚಮಚ
ಜೀರಿಗೆ – 1/4 ಚಮಚ
ಎಣ್ಣೆ – 1 ಚಮಚ
ಉಪ್ಪು ರುಚಿಗೆ ತಕ್ಕ ಶ್ಟು
ಮೊಸರು – 2 ಲೋಟ
ನೀರು – 2 ಲೋಟ
ಸಕ್ಕರೆ – 1/2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಅರಿಶಿಣ ಬೇಕಾದರೆ ಸ್ವಲ್ಪ
ಮಾಡುವ ಬಗೆ
ಅವಲಕ್ಕಿ ತೊಳೆದು ಇಡಿರಿ. ಉಪ್ಪಿಟ್ಟು [ಗೋದಿ] ರವೆ ತೊಳೆದು ಅವಲಕ್ಕಿ ಜೊತೆ ಸೇರಿಸಿರಿ. ಮೊಸರು, ನೀರು ಸೇರಿಸಿ ಮಜ್ಜಿಗೆ ಮಾಡಿ ಅವಲಕ್ಕಿ ರವೆಗೆ ಸೇರಿಸಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ ಜೀರಿಗೆ, ಗೋಡಂಬಿ, ಕಡಲೇಬೀಜ ಮತ್ತು ಹಸಿಮೆಣಸಿನಕಾಯಿ ಕತ್ತರಿಸಿ ಹಾಕಿ ಸ್ವಲ್ಪ ಹುರಿಯಿರಿ. ಉಪ್ಪು, ಸಕ್ಕರೆ, ಅರಿಶಿಣ ನಿಮ್ಮ ಇಶ್ಟದ ಅನುಸಾರ ಹಾಕಿ. ಕೊತ್ತಂಬರಿ ಸೊಪ್ಪು ಸ್ವಲ್ಪ ಕತ್ತರಿಸಿ ಹಾಕಿ. ಈಗ ಒಗ್ಗರಣೆ ಅವಲಕ್ಕಿ ರವೆ ಮಿಶ್ರಣದಲ್ಲಿ ಚೆನ್ನಾಗಿ ಕಲಸಿ ಹತ್ತು ನಿಮಿಶ ನೆನೆಯಲು ಇಡಬೇಕು.
10 ನಿಮಿಶದ ನಂತರ ಇನ್ನೊಮ್ಮೆ ಚೆನ್ನಾಗಿ ಕಲಸಿ ಮುಟಗಿ ಮಾಡಿ ಅತವಾ ವಡೆ ಆಕಾರ ಮಾಡಿ ಕುಕ್ಕರ‍್ ನಲ್ಲಿ ಇಡ್ಲಿಯಂತೆ ಬೇಯಿಸಿರಿ. ಅತವಾ ಒಂದು ಬಾಣಲೆಯಲ್ಲಿ ನೀರು ಹಾಕಿ ಪಾತ್ರೆ ಇಟ್ಟು ಅದರಲ್ಲಿ ಕಡುಬು ಇಟ್ಟು ಮುಚ್ಚಳ ಮುಚ್ಚಿ ಬೇಯಿಸಿರಿ . [ಇಡ್ಲಿ ತಟ್ಟೆಗೆ , ಪಾತ್ರೆಗೆ ಎಣ್ಣೆ ಹಚ್ಚಬೇಕಿಲ್ಲ]
ಹತ್ತು ನಿಮಿಶ ದಲ್ಲಿ ಬೇಯುತ್ತದೆ. ಅವಲಕ್ಕಿ ಹವೆಗಡುಬು ತಯಾರಾಯಿತು. ಚಟ್ನಿ, ಸಾಂಬಾರ‍್ ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು