ಮಾಡಿ ನೋಡಿ ಚಳಿಗಾಲಕ್ಕೆ ಬೋಂಡಾ, ಬಜ್ಜಿ
– ನಿತಿನ್ ಗೌಡ.
ಏನೇನು ಬೇಕು ?
- ಕಡಲೆ ಹಿಟ್ಟು – 1 ಕಪ್ಪು ( 150 ಗ್ರಾಂ )
- ಕಾರದ ಪುಡಿ – 1 ಚಮಚ
- ಅರಿಶಿಣ – ಅರ್ದ ಚಮಚ
- ಜೀರಿಗೆ ಪುಡಿ – ಅರ್ದ ಚಮಚ
- ಶುಂಟಿ ಬೆಳ್ಳುಳ್ಳಿ ಪೇಶ್ಟು – ಕಾಲು ಚಮಚ
- ಉಪ್ಪು- ರುಚಿಗೆ ತಕ್ಕಶ್ಟು
- ಅಕ್ಕಿ ಹಿಟ್ಟು – 1 ಚಮಚ
- ಆಲೂಗಡ್ಡೆ – 2
- ಈರುಳ್ಳಿ – 1
- ಡೊಣ್ಣ ಮೆಣಸಿನ ಕಾಯಿ – 1
- ಪುದೀನ – ಸ್ವಲ್ಪ
- ಕೊತ್ತಂಬರಿ – ಸ್ವಲ್ಪ
- ಹಸಿಮೆಣಸಿನ ಕಾಯಿ – 3
- ಎಣ್ಣೆ – ಕರಿಯಲು ಬೇಕಾಗುವಶ್ಟು
ಮಾಡುವ ಬಗೆ:
ಮೊದಲಿಗೆ ಆಲೂಗಡ್ಡೆಯನ್ನು ಹೆಚ್ಚಿ ತೊಳೆದು, ಮತ್ತೆ ನೀರಲ್ಲಿ ನೆನಸಿಡಿ. ನಂತರ ಮೆಣಸಿನ ಕಾಯಿ ಸೀಳಿ ಹೆಚ್ಚಿಕೊಳ್ಳಿ ಮತ್ತು ಈರುಳ್ಳಿ ಹೆಚ್ಚಿಕೊಳ್ಳಿರಿ. ಈಗ ಒಂದು ಪಾತ್ರೆಗೆ ಕಡೆಲೆ ಹಿಟ್ಟು, ಅರಿಶಿಣ, ಜೀರಿಗೆ ಪುಡಿ, ಉಪ್ಪು, ಶುಂಟಿ ಬೆಳ್ಳುಳ್ಳಿ ಪೇಶ್ಟು ಮತ್ತು ಕಾರದ ಪುಡಿ ಹಾಕಿ ಕಲಸಿ ಅದಕ್ಕೆ ಸ್ವಲ್ಪ ನೀರ ಹಾಕಿ ಪೇಶ್ಟ್ ಇಲ್ಲವೆ ಅಂಟು ಬರುವ ಹದಕೆ ಕಲಸಿ, ಅದಕ್ಕೆ ಹೆಚ್ಚಿಟ್ಟುಕೊಂಡ ಆಲೂಗಡ್ಡೆ, ಮೆಣಸಿನ ಕಾಯಿ, ಈರುಳ್ಳಿ ಹಾಕಿ ಒಂದು ಹತ್ತು ನಿಮಿಶ ಪಕ್ಕಕ್ಕಿಡಿ. ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ, ಅದು ಕಾದನಂತರ ನಡು ಉರಿಯಲ್ಲಿ ಆಲೂಗಡ್ಡೆ, ಮೆಣಸಿನ ಕಾಯಿ ಮತ್ತು ಈರುಳ್ಳಿ ಕರಿದು ತೆಗೆಯಿರಿ. ಈಗ ಒಂದು ಮಿಕ್ಸಿಗೆ ಹಸಿ ಮೆಣಸು, ಉಪ್ಪು, ಪುದೀನ ಮತ್ತು ಕೊತ್ತಂಬರಿ ಹಾಕಿ ರುಬ್ಬಿ ಚಟ್ನಿ ಮಾಡಿಕೊಳ್ಳಿರಿ. ಚಟ್ನಿಯ ಜೊತೆ ಇವುಗಳನ್ನು ಸವಿಯಲು ಚೆನ್ನಾಗಿರುತ್ತದೆ.
( ಚಿತ್ರಸೆಲೆ: ಬರಹಗಾರರು )
ಇತ್ತೀಚಿನ ಅನಿಸಿಕೆಗಳು