ಕಡಲೆ ಬೇಳೆ ವಡೆ
ಏನೇನು ಬೇಕು
- ಕಡಲೆ ಬೇಳೆ – 1 ಲೋಟ
- ಈರುಳ್ಳಿ – 2
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಬೆಳ್ಳುಳ್ಳಿ – 4 ಎಸಳು
- ಶುಂಟಿ – 1 ಸಣ್ಣ ಚೂರು
- ಚಕ್ಕೆ – 1 ಸಣ್ಣ ಚೂರು
- ಲವಂಗ – 2
- ಒಣ ಮೆಣಸಿನಕಾಯಿ – 2
- ಹಸಿ ಮೆಣಸಿನಕಾಯಿ – 5
- ಅಡುಗೆ ಎಣ್ಣೆ
ಮಾಡುವ ಬಗೆ
ಕಡಲೆ ಬೇಳೆಯನ್ನು 3 ಗಂಟೆ ನೀರಿನಲ್ಲಿ ನೆನೆಯಲು ಬಿಡಿ. ಒಂದು ಸಣ್ಣ ಜಾರ್ ಗೆ ಶುಂಟಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಒಣ ಮೆಣಸಿನಕಾಯಿ ಹಾಗೂ ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನೆನೆಸಿಟ್ಟಿದ್ದ ಬೇಳೆಯಿಂದ ನೀರು ತಗೆದು, ಬೇಳೆಯನ್ನು ಒಂದು ಜಾರ್ ಗೆ ಹಾಕಿಕೊಂಡು, ತರಿತರಿಯಾಗಿ ಬರುವಂತೆ ರುಬ್ಬಿಕೊಳ್ಳಿ (ನುಣ್ಣಗೆ ರುಬ್ಬಬಾರದು). ನಂತರ ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ.
ರುಬ್ಬಿಟ್ಟಿದ ಬೇಳೆಗೆ, ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ರುಬ್ಬಿಕೊಂಡಿದ್ದ ಮಸಾಲೆ ಹಾಕಿ, ನಂತರ ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಕಲಸಿ. ಒಂದು ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಕಾಯಿಸಿ. ವಡೆಯ ಆಕಾರದಲ್ಲಿ ತಟ್ಟಿಕೊಂಡು ಕಾದ ಎಣ್ಣೆಗೆ ಬಿಟ್ಟು, ಕರಿಯಿರಿ. ಈಗ ಗರಿಗರಿಯಾದ ಕಡಲೆ ಬೇಳೆ ವಡೆ ರೆಡಿ.
ಇತ್ತೀಚಿನ ಅನಿಸಿಕೆಗಳು