ಕವಿತೆ: ಸ್ವಾಬಿಮಾನದ ಸೌದ
ನೋಡು ನನ್ನ ಕಾಯ ಜಗದ ಮಾಯ
ಕೂಡು ಮನದ ಕವನ ಈ ಬವನ
ಬಂದದಿ ಬೆಳೆದರೂ ನಾ ಒಂಟಿ ಸೌದ
ಬಿಡದ ಬಿಮ್ಮು ಇದುವೆ ಈ ವಿಕಾಸ ಸೌದ
ರೂಪ ಕೊಟ್ಟವರ ರಕುತ
ಹಂಚಿದೆ ಇಲ್ಲಿ
ಯಾರಿಗೂ ಒಡ್ಡದ ಕೈ, ಇದು ಸ್ವಾಬಿಮಾನಕೆ ಸೈ
ಬಗ್ಗದ ಬಡ ಕಾಯ ತಲೆ ಎತ್ತಿ ನಡೆದಿದೆ ಸ್ವಾಬಿಮಾನದ ಗುರುತಾಗಿ
ದುಮ್ಮಿಕ್ಕುವ ಜಲಪಾತವ ತಡೆವರ‍್ಯಾರೋ
ತಲೆ ಎತ್ತಿ ಸರಿಯಾಗಿ ನಡೆಯೋನ ಮಣಿಸೊರ‍್ಯಾರೋ
ಸರಳ ಸ್ವಚ್ಚ ಸತ್ಯದ ಮನ ಬೆರೆತ ಕಾಯ ಅಂಜುವುದೆಂತು
ಪ್ರಾಪಂಚಿಕ ಸೌದಕೆ ಇಹುದು ಮಿತಿ
ಸ್ವಾಬಿಮಾನ ಸೌದ ಶ್ರುತಿ
ಮನಕೆ ಮಿತಿಯಿರದ ಸ್ವಚ್ಚಂದ ಕ್ರುತಿ
ಪರರಿಗೆ ಮೇಲ್ಪಂಕ್ತಿ ಸೌದ ಶ್ರೇಶ್ಟ ಪ್ರಬ್ರುತಿ
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು