ಗೋದಿ ಪುರಿ (ಚುರುಮುರಿ)
– ಸವಿತಾ.
ಬೇಕಾಗುವ ಸಾಮಾನುಗಳು
ಗೋದಿ ಪುರಿ (ಚುರುಮುರಿ) – 2 ಬಟ್ಟಲು
ಒಣ ಕೊಬ್ಬರಿ ಹೋಳು – 8
ಕಡಲೇಬೀಜ (ಶೇಂಗಾ) – 2 ಚಮಚ
ಹುರಿಗಡಲೆ (ಪುಟಾಣಿ) – 1 ಚಮಚ
ಕರಿಬೇವು – 2- 3 ಕಡ್ಡಿ
ಒಣ ಮೆಣಸಿನ ಕಾಯಿ – 3
ಒಣ ಕಾರದ ಪುಡಿ – 1/2 ಚಮಚ
ಉಪ್ಪು ರುಚಿಗೆ ತಕ್ಕ ಶ್ಟು
ಅರಿಶಿಣ ಸ್ವಲ್ಪ
ಸಕ್ಕರೆ – 1 ಚಮಚ
ಗೋಡಂಬಿ – 10
ಒಣ ದ್ರಾಕ್ಶಿ – 15 – 20
ಎಣ್ಣೆ – 3 ಚಮಚ
ಸಾಸಿವೆ – 1/2 ಚಮಚ
ಜೀರಿಗೆ – 1/2 ಚಮಚ
ಮಾಡುವ ಬಗೆ
ಬಾಣಲೆಗೆ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಇಟ್ಟು, ಸಾಸಿವೆ ಜೀರಿಗೆ ಹಾಕಿ ನಂತರ ಕರಿಬೇವು, ಒಣ ಮೆಣಸಿನ ಕಾಯಿ ಮುರಿದು ಹಾಕಿ ಸ್ವಲ್ಪ ಹುರಿಯಿರಿ. ಹುರಿಗಡಲೆ, ಕಡಲೇಬೀಜ ಹಾಕಿ. ಒಣ ಕೊಬ್ಬರಿ ಕತ್ತರಿಸಿ ಹೋಳು ಮಾಡಿ ಹಾಕಿ. ಗೋಡಂಬಿ, ಒಣ ದ್ರಾಕ್ಶಿ, ಉಪ್ಪು, ಸ್ವಲ್ಪಅರಿಶಿಣ, ಒಣ ಕಾರದ ಪುಡಿ ಮತ್ತು ಸಕ್ಕರೆ ಹಾಕಿ ಹುರಿದು ಕೆಳಗಿಳಿಸಿರಿ. ಈ ಒಗ್ಗರಣೆಗೆ ಗೋದಿ ಪುರಿ ಕಲಸಿ ಇಟ್ಟುಕೊಳ್ಳಿರಿ.
ಈ ರೀತಿ ತಯಾರಿಸಿದ ಗೋದಿ ಪುರಿಯನ್ನು ವಾರಗಳ ವರೆಗೆ ಇಟ್ಟು ತಿನ್ನಬಹುದು. ದಿಡೀರ್ ಆಗಿ ತಯಾರಿಸಿ ಸಂಜೆ ಚಹಾ ಜೊತೆ ಸವಿಯಬಹುದು.
ಇತ್ತೀಚಿನ ಅನಿಸಿಕೆಗಳು