ಮಾಡಿ ನೋಡಿ ಚಾಕೊಲೇಟ್ ಚಿಕ್ಕಿ
– ಸವಿತಾ.
ಏನೇನು ಬೇಕು ?
- ಬೌರ‍್ನವಿಟಾ ಪುಡಿ – 1 ಕಪ್ಪು
- ಹಾಲಿನ ಪುಡಿ – 1 ಕಪ್ಪು
- ಸಕ್ಕರೆ – 2 ಚಮಚ
- ನೀರು – 2 ಚಮಚ
- ಕಡಲೇಬೀಜ – 1 ಕಪ್ಪು
- ಗೋಡಂಬಿ – ಅರ್‍ದ ಕಪ್ಪು
- ಬಾದಾಮಿ – ಅರ್‍ದ ಕಪ್ಪು
- ಎಳ್ಳು – ಅರ್‍ದ ಕಪ್ಪು
- ಕಮಲದ ಬೀಜ (ಮಕಾನಾ) – ಅರ್‍ದ ಕಪ್ಪು
- ಬೆಲ್ಲ ಅತವಾ ಸಕ್ಕರೆ – ಮುಕ್ಕಾಲು ಕಪ್ಪು
- ತುಪ್ಪ – 3 ಚಮಚ
ಮಾಡುವ ಬಗೆ
ಮೊದಲಿಗೆ ಒಂದು ಪಾತ್ರೆಗೆ ಸ್ವಲ್ಪ ನೀರು ಸೇರಿಸಿ ಕುದಿಯಲು ಇಡಬೇಕು. ಆಮೇಲೆ ಒಂದು ಸಣ್ಣ ಪಾತ್ರೆಗೆ ಬೌರ‍್ನವಿಟಾ ಪುಡಿ, ಹಾಲಿನ ಪುಡಿ, ಸಕ್ಕರೆ, 2 ಚಮಚ ನೀರು ಹಾಕಿ ಕುದಿಯುವ ನೀರಿನ ಮೇಲೆ ಇಡಿ. ಈ ರೀತಿ ಕರಗಿಸಿ ಚಾಕೋಲೇಟ್ ತಯಾರಿಸಿ ಇಟ್ಟುಕೊಳ್ಳಿರಿ. ನಂತರ ಕಡಲೇಬೀಜ ಬಾಣಲೆಗೆ ಹಾಕಿ ಹುರಿದು ತೆಗೆಯಿರಿ. ಕಮಲದ ಬೀಜಗಳನ್ನು (ಮಕಾನಾ) ಹುರಿದು ತೆಗೆಯಿರಿ. ಈಗ ಬಾದಾಮಿ, ಗೋಡಂಬಿ, ಎಳ್ಳು ಸ್ವಲ್ಪ ಬಿಸಿ ಮಾಡಿ ತೆಗೆಯಿರಿ. ಈಗ ಬೆಲ್ಲ ಮತ್ತು 3 ಚಮಚ ನೀರು ಹಾಕಿ ಕರಗಿಸಿ ಇಟ್ಟುಕೊಳ್ಳಿರಿ. ಇದು ಆರಿದ ನಂತರ ಕಡಲೇಬೀಜ, ಮಕಾನಾ, ಬಾದಾಮಿ, ಗೋಡಂಬಿ, ಎಳ್ಳು ಮಿಕ್ಸರ್ ನಲ್ಲಿ ಸ್ವಲ್ಪ ಪುಡಿ ಮಾಡಿ ಹಾಕಿರಿ. ನಂತರ ಕರಗಿಸಿದ ಬೆಲ್ಲಕ್ಕೆ ಸೇರಿಸಿ ಕೈಯಾಡಿಸಿ ಮತ್ತು ಚಾಕೋಲೇಟ್ ಸೇರಿಸಿ ಸ್ವಲ್ಪ ಬಿಸಿ ಮಾಡಿರಿ. ನಂತರ ತುಪ್ಪ ಸೇರಿಸಿ ಚೆನ್ನಾಗಿ ಕಲಸಿ ಉಂಡೆ, ಅತವಾ ಚಕಳಿ ಮಾಡಿರಿ. ಈಗ ಆರೋಗ್ಯ ಕರ ಚಾಕೋಲೇಟ್ ಚಿಕ್ಕಿ ಸವಿಯಲು ಸಿದ್ದ.
(ಚಿತ್ರಸೆಲೆ: ಬರಹಗಾರರು )
ಇತ್ತೀಚಿನ ಅನಿಸಿಕೆಗಳು