ಕವಿತೆ: ಬ್ರಾಂತಿ
ಎಳೆ ಬಿಸಿಲು ನೆಲ ಸೋಕಿ
ಸುತ್ತೆಲ್ಲ ಚಿಲಿಪಿಲಿಯ ರಾಗ ತಾಕಿ
ಮುಗ್ದ ಮನದ ರಾಗ ಕೆದಕಿ
ಅವನಾಗಮನದ ಆತುರದ ಹೊದಿಕಿ
ರವಿ ಉದಿತ ಶಕ್ತಿ ರಜನಿ ಮುಕ್ತಿ
ಮಜ್ಜನ ಮುದಿತ ಮನ ಉಕ್ಕಿ ಬಕ್ತಿ
ಶೀತಲ ಮೆಲು ಗಾಳಿ ಬೀಸಿ ಗುಡಿಸಿ
ಆಲಂಗಿಸುವ ಕೈ ರಂಗೋಲಿ ಬಿಡಿಸಿ
ಬಂದೆ ಬರುವ ದಂಡಿನ ದಳವಾಯಿ
ಪ್ರೀತಿ ಸೂಸಿ ಹರಿಸನೇ ಪ್ರೇಮದಾಯಿ
ಬಾರದಿರಲಿ ಅಪಶಕುನದ ತಂತಿ
ಅಳಿಯದಿರಲಿ ನಂಟು ಇದು ಮನದ ಬ್ರಾಂತಿ
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು