ಕವಿತೆ:ಮಾಯಾಜಾಲ
ಒಲವಿನ ಮಿಡಿತವಿದು ಹೊಸತು
ನಿದ್ದೆಯ ಕೆಡಿಸಿತು, ಊಟವ ಮರೆಸಿತು
ಏನಾಗಿದೆ ನನಗೆ ಎಲ್ಲವೂ ಹೊಸತು
ಒಲವೆಂದರೆ ಸಿಹಿಯಂತೆ
ಒಲವೆಂದರೆ ಹಿತವಂತೆ
ಎಲ್ಲಾ ಅಂತೆ ಕಂತೆಗಳು ನಿಜವಾಗಿವೆ, ಇದೇ ಒಲವಂತೆ
ನೀರು ನೀಗಿಸದ ದಾಹವಿದು
ಗಾಳಿ ನೀಡಲಾರದ ತಂಪಿದು
ಎಲ್ಲವನು ಮರೆಸಿದೆ, ಹೊಸ ಆಸೆಗಳ ಹುಟ್ಟುಹಾಕಿದೆ
ಹೊರಬರಲಾಗದ ಮಾಯಾಜಾಲವಿದು
ಹೊಸ ಲೋಕದಲಿ ನನ್ನ ಬಿಟ್ಟಿಹುದು
ಹೊರ ಹೋಗುವುದ ಮರೆಸಿರುವುದು
(ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು